ಶ್ರೀನಗರ್: ಶ್ರೀನಗರದ ಪೂಂಚ್‌ನ ಸುರಾನ್ ಕೋಟ್ ಪ್ರದೇಶದಲ್ಲಿ ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಉಗ್ರ ಅಬು ಝರಾರ್‌ನನ್ನು ಹತ್ಯೆಗೈದಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ. ಪೂಂಚ್ ಜಿಲ್ಲೆಯ ಸುರಾನ್ ಕೋಟ್ ಪ್ರದೇಶದ ಬುಫ್ಲಿಯಾಜ್‌ನಲ್ಲಿ ನಡೆದ ಎನ್ ಕೌಂಟರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅಡಗುತಾಣದಿಂದ ಭದ್ರತಾ ಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದ್ದರು. ಆದರೆ ಸೇನೆಯ ಪ್ರತಿ ದಾಳಿಯಲ್ಲಿ ವಿದೇಶಿ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇನ್ನುಳಿದ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಎ.ಕೆ.47, ನಾಲ್ಕು ಮ್ಯಾಗಝೀನ್ಸ್, ಒಂದು ಗ್ರೆನೇಡ್ ಹಾಗೂ ನಗದು (ಭಾರತದ ಕರೆನ್ಸಿ) ಹಣ ವಶಪಡಿಸಿಕೊಂಡಿದ್ದು, ಸಾವನ್ನಪ್ಪಿರುವ ಮೋಸ್ಟ್ ವಾಂಟೆಡ್ ಉಗ್ರನಿಗೆ ಪಾಕಿಸ್ತಾನದ ನಂಟಿದೆ ಎಂಬುದು ಬಹಿರಂಗವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
PublicNext
14/12/2021 07:00 pm