ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ದುರ್ವರ್ತನೆ ತೋರಿದ ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಂಡ ಎಬಿವಿಪಿ ಗುರುವಿನ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚಿಸಿದ ವಿದ್ಯಾರ್ಥಿಗಳು….

ದಾವಣಗೆರೆ: ಹಿಂದಿ ಶಿಕ್ಷಕರೊಬ್ಬರ ಮೇಲೆ ಎಸ್‌ಎಸ್‌ಎಲ್‌ಸಿ ಓದುವ ಆರು ವಿದ್ಯಾರ್ಥಿಗಳು ಕಸದ ಬುಟ್ಟಿ ಹಾಕಿ ದುರ್ವತನೆ ತೋರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಘಟನೆಯಲ್ಲಿ ವಿದ್ಯಾರ್ಥಿಗಳ ವರ್ತನೆ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಚೆನ್ನಗಿರಿ ಎಬಿವಿಪಿ ಕಾರ್ಯಕರ್ತರು ಪುಂಡಾಟಿಕೆ ನಡೆಸಿದ ವಿದ್ಯಾರ್ಥಿಗಳನ್ನು ಕರೆಸಿ ಗುರುಗಳ ಕಾಲಿಗೆ ಅಡ್ಡಬಿದ್ದು ಕ್ಷಮೆಯಾಚಿಸುವಂತೆ ತಾಕೀತು ಮಾಡಿದ್ರು. ಅಂತೆಯೇ ವಿದ್ಯಾರ್ಥಿಗಳು ಗುರುವಿನ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚಿಸಿದ ವೀಡಿಯೋ ಕೂಡಾ ಇದೀಗ ವೈರಲ್ ಆಗಿದೆ. ಹಾಗೆಯೇ ಪುಂಡಾಟಿಕೆ ನಡೆಸಿದ ಎಲ್ಲಾ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹವೂ ಕೇಳಿಬರ್ತಿದೆ.

Edited By : Manjunath H D
PublicNext

PublicNext

11/12/2021 02:42 pm

Cinque Terre

59.35 K

Cinque Terre

21

ಸಂಬಂಧಿತ ಸುದ್ದಿ