ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸಿಬಿ ದಾಳಿ : ಅಬಕಾರಿ ಡಿವೈಎಸ್ಪಿ ಶಿವ ಹರಳಯ್ಯ ಲಾಕ್

ಚಿತ್ರದುರ್ಗ : ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಿಂದ 15 ಸಾವಿರ ಲಂಚ ಪಡೆಯುತ್ತಿದ್ದಾಗ ಅಬಕಾರಿ ಡಿವೈಎಸ್ಪಿ ಶಿವಹರಳಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಜಂಬಗೊಂಡನಹಳ್ಳಿಯ ಲಕ್ಷ್ಮಿ ನರಸಿಂಹ ಲಾಡ್ಜಿಂಗ್ ಬಾರ್ ಮತ್ತು ರೆಸ್ಟೋರೆಂಟ್ ಗೆ ಪದೇ ಪದೇ ಭೇಟಿ ನೀಡುತ್ತಿದ್ದ ಡಿವೈಎಸ್ಪಿ ಶಿವ ಹರಳಯ್ಯ, ಲೆಕ್ಕದ ಪುಸ್ತಕ ಚೆಕ್ ಮಾಡಿ ಸರಿಯಿಲ್ಲ ನಿಮ್ಮ ಲೈಸೆನ್ಸ್ ಅಮಾನತ್ತು ಮಾಡುತ್ತೇನೆ ಎಂದು ಹೆದರಿಸಿ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಬಾರ್ ಮಾಲೀಕರು ಎಸಿಬಿಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಎಸಿಬಿ ಡಿವೈಎಸ್ಪಿ ಬಸವರಾಜ್ ಮುಗುದುಮ್ ಹಾಗೂ ಅಧಿಕಾರಿಗಳು ದಾಳಿ ನಡೆಸಿ ಅಬಕಾರಿ ಡಿವೈಎಸ್ಪಿ ಶಿವಹರಳಯ್ಯ ಲಂಚ ಪಡೆಯುವಾಗ ವಶಕ್ಕೆ ತೆಗೆದುಕೊಂಡು ಲಂಚದ ಮೊತ್ತವನ್ನು ಜಪ್ತಿ ಮಾಡಿದ್ದು, ತನಿಖೆ ಮುಂದುವರೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Edited By : Shivu K
PublicNext

PublicNext

03/12/2021 06:39 pm

Cinque Terre

97.61 K

Cinque Terre

3