ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಡೆಯಲು ಬಂದವರ ಮೇಲೆ ಮಚ್ಚು ಬೀಸಿ ಪತ್ನಿಯನ್ನು ಕೊಂದ ಪತಿ: 'ನವಿಲೂರು ರಕ್ತರಾತ್ರಿ'

ಮೈಸೂರು: ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪಾಪಿ ಪತಿ ಆ ವೇಳೆ ತನ್ನನ್ನು ತಡೆಯಲು ಬಂದ ನಾಲ್ವರ ಮೇಲೆ ಮಚ್ಚು ಬೀಸಿದ್ದಾನೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಿನ್ನೆ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ಈರಯ್ಯ ಕೊಲೆ ಆರೋಪಿ. ಈತ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಜೈಲಿನಿಂದ ಬಂದ ಕೆಲ ದಿನಗಳ ನಂತರ ನಿಂಗಮ್ಮ ಎಂಬಾಕೆಯೊಂದಿಗೆ ಎರಡನೇ ಮದುವೆ ಆಗಿದ್ದ. ಈಕೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯ ಈರಯ್ಯನಿಗೆ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಪತ್ನಿ ನಿಂಗಮ್ಮಳನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ತಡೆಯಲು ಬಂದ ನಾಲ್ವರ ಮೇಲೂ ಈರಯ್ಯ ಮಚ್ಚು ಬೀಸಿದ್ದಾನೆ. ಹೀಗಾಗಿ ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಆರೋಪಿ ಈರಯ್ಯನನ್ನು ಬಂಧಿಸಿದ್ದಾರೆ.

Edited By : Nagaraj Tulugeri
PublicNext

PublicNext

02/12/2021 09:41 am

Cinque Terre

40.62 K

Cinque Terre

2

ಸಂಬಂಧಿತ ಸುದ್ದಿ