ಶಿವಮೊಗ್ಗ : ಎಣ್ಣೆ ಏಟಲ್ಲಿ ದಾವಣಗೆರೆ-ರಿಪ್ಪನ್ ಪೇಟೆ ಬಸ್ ಹತ್ತಿರುವ ಪೊಲೀಸಪ್ಪ ಬಸ್ಸಿನಲ್ಲಿಯೇ ಓಲಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಎಣ್ಣೆ ಮಂಪರಿನಲ್ಲಿ ಬಸ್ಸಿನಲ್ಲೇ ಜಾರಿ ಬಿದ್ದ ಪೊಲೀಸಪ್ಪ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ. ಹಾಲಪ್ಪ ಎಂದು ಗುರುತಿಸಲಾಗಿದೆ.
ಪ್ರತಿದಿನ ಶಿವಮೊಗ್ಗದಿಂದ ರಿಪ್ಪನ್ ಪೇಟೆಗೆ ಸಂಚರಿಸುವ ಹಾಲಪ್ಪ ಎಂದಿನಂತೆ, ನಿನ್ನೆಯೂ ಡ್ಯೂಟಿಗೆ ಹೊರಟಿದ್ದರು ನಿನ್ನೆ ರಾತ್ರಿ ಫುಲ್ ಟೈಟಾಗಿ ಖಾಸಗಿ ಬಸ್ ಹತ್ತಿದ್ದ ಹಾಲಪ್ಪ ನೈಟ್ ಡ್ಯೂಟಿ ಇದ್ರು ಟೈಟಾಗಿದ್ದು ಮಾತ್ರ ವಿಪರ್ಯಾಸ.
ಇನ್ನು ಎ.ಎಸ್.ಐ. ವರ್ತನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಪ್ರಯಾಣಿಕರು ಆರಕ್ಷಕರೇ ಹೀಗಾದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಂದು ಕಡೆ ಕುಟುಂಬದಲ್ಲಾದ ಜಗಳದಿಂದಾಗಿ ಪೊಲೀಸಪ್ಪ ಟೈಟಾಗಿದ್ರಂತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
PublicNext
30/11/2021 07:11 pm