ಇಡುಕ್ಕಿ: ಪ್ರೀತಿ ಯಾರ ಮೇಲೆ ಹೇಗಾಗತ್ತೊ ಗೊತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ಆಂಟಿಗೆ ಯುವಕನೋರ್ವನ ಮೇಲೆ ಲವ್ ಆಗಿದೆ. ಇನ್ನು ಎರಡು ಮಕ್ಕಳ ತಾಯಿಯಾಗಿರುವ ಆಂಟಿ ತನ್ನ ಮದುವೆ ಪ್ರಸ್ತಾಪವನ್ನು ಯುವಕನ ಮುಂದೆ ಇಟ್ಟಿದ್ದಾಳೆ. ಇದನ್ನು ಒಪ್ಪದ ಯುವಕ ಆಂಟಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.
ಇದರಿಂದ ಕೋಪಿತಳಾದ ಆಂಟಿ ಯುವಕ ಮೇಲೆ ಆಸಿಡ್ ದಾಳಿ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.ಇನ್ನು 35 ವರ್ಷದ ಶೀಬಾ ಎಂಬ ಮಹಿಳೆ ಈ ದಾಳಿ ನಡೆಸಿದ್ದು, ತಿರುವನಂತಪುರಂನ ಪೂಜಾಪ್ಪುರ ಮೂಲದ 27 ವರ್ಷದ ವ್ಯಕ್ತಿ ಆಸಿಡ್ ಬಿದ್ದ ಪರಿಣಾಮ ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ನವೆಂಬರ್ 16ರಂದು ಈ ದಾಳಿ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ದಾಳಿಗೆ ಒಳಗಾದ ಸಂತ್ರಸ್ತ ಅರುಣ್ ಕುಮಾರ್ ಅವರು ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಅವರು ಒಂದು ದೃಷ್ಟಿ ಕಳೆದುಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ. ಫೇಸ್ ಬುಕ್ ಮೂಲಕ ಪರಿಚಯವಾದ ಇವರ ಮಧ್ಯೆ ಅನ್ಯೋನ್ಯತೆ ಬೆಳೆದಿತ್ತು. ತಿರುವನಂತಪುರಂಗೆ ತೆರಳಿ ಅರುಣ್ ಕುಮಾರ್ ಜತೆ ವಾಸಿಸಲು ಶೀಬಾ ಸಿದ್ಧರಾಗಿದ್ದರು. ಆದರೆ ಶೀಬಾ ಸಂತೋಷ್ ಅವರಿಗೆ ಮದುವೆಯಾಗಿದೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನುವುದು ಅರುಣ್ ಅವರಿಗೆ ತಿಳಿದು ಆಕೆಯನ್ನು ತಿರಸ್ಕರಿಸಲು ಮುಂದಾಗಿದ್ದರು.
PublicNext
21/11/2021 05:26 pm