ಭುವನೇಶ್ವರ: 1.5 ಕೋಟಿ ರೂ. ಮೌಲ್ಯದ 1 ಕೆಜಿ ಹಾವಿನ ವಿಷವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಒಡಿಶಾದ ದಿಯೋಗರ್ ಪೊಲೀಸರು ಬಂಧಿಸಿದ್ದಾರೆ.
ಕೈಲಾಶ್ ಚಂದ್ರ ಸಾಹು ಮತ್ತು ರಂಜನ್ ಕುಮಾರ್ ಪಾಧಿ ಬಂಧಿತ ಆರೋಪಿಗಳು. ಈ ಕುರಿತು ಮಾತನಾಡಿದ ದಿಯೋಗರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರತ್ಯೂಷ್ ಮೊಹಾಪಾತ್ರ, ಶುಕ್ರವಾರ ಸಂಬಲ್ಪುರ ಜಿಲ್ಲೆಯ ಸಿಂದೂರ್‍ಪಂಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಹಾವಿನ ವಿಷವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ನಮ್ಮ ತಂಡವು ಗ್ರಾಹಕರಂತೆ ಆ ವ್ಯಕ್ತಿಗಳನ್ನು ಭೇಟಿ ಮಾಡಿತ್ತು. ಈ ವೇಳೆ ಕೈಲಾಶ್ ಚಂದ್ರ ಸಾಹು ಮತ್ತು ರಂಜನ್ ಕುಮಾರ್ ಪಾಧಿ ಗಾಜಿನ ಪಾತ್ರೆಯಲ್ಲಿ 1 ಕೆಜಿ ಹಾವಿನ ವಿಷ ಮಾರಾಟ ಮಾಡುತ್ತಿದ್ದರು. ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ವಸ್ತು ಹಾವಿನ ವಿಷವೇ ಎಂಬುದನ್ನು ಖಚಿತಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
PublicNext
21/11/2021 03:31 pm