ಬೀದರ್: ತಳ್ಳುವ ಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದಾತನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮುಲ್ತಾನಿ ಕಾಲೋನಿಯ ಅಜ್ಜು ಸನ್ ಆಫ್ ಶಿರಾಜ್ (32) ಕೊಲೆಯಾದ ದುರ್ದೈವಿ. ಬೇರೆ ಎಲ್ಲೋ ಕೊಲೆ ಮಾಡಿ ಸ್ವಪ್ನ ಚಿತ್ರಮಂದಿರದ ಪಕ್ಕದಲ್ಲಿ ಈತನ ಶವ ಎಸೆಯಲಾಗಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
16/11/2021 01:07 pm