ಬೆಂಗಳೂರು: ಕ್ಯಾನ್ಸರ್‌ಪೀಡಿತ ಪತ್ನಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಔಷಧ ಅಂಗಡಿ ಮಾಲೀಕ ಹಾಗೂ ಸಲಹೆ ಕೊಟ್ಟ ವ್ಯಕ್ತಿ ವಿರುದ್ಧ ಪತಿ ದೂರು ನೀಡಿದ್ದಾರೆ.
ಜೀವನ್ ಭೀಮಾನಗರದ ಪ್ರೊ.ಅವಿನಾಶ್ ಶಂಕರ್ ಶೇಟ್ ಎಂಬುವರು ಔಷಧ ಅಂಗಡಿಯ ಶಂಕರ್ ಯಾದವ್ ಹಾಗೂ ಸಂತೋಷ್ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಸಂತೋಷ್ ಎಂಬಾತ ಪರಿಚಯವಾಗಿದ್ದ. ಸ್ನೇಹಿತ ಶಂಕರ್ ಪತ್ನಿಗೂ ಕ್ಯಾನ್ಸರ್ ಬಂದಿತ್ತು. ಅವರು ಆರ್ಯುವೇದ ಔಷಧ ಪಡೆದು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನು ನಂಬಿ ಕಬ್ಬನ್‌ಪೇಟೆ ಆಯುರ್ವೇದ ಅಂಗಡಿಯಲ್ಲಿ 2.20 ಲಕ್ಷ ರೂ. ಕೊಟ್ಟು ಔಷಧ ಖರೀದಿಸಿದೆ. ಆದರೂ ಪತ್ನಿ ಉಳಿಯಲಿಲ್ಲ ಎಂದು ಪ್ರೊ.ಅವಿನಾಶ್ ದೂರಿದ್ದಾರೆ.
ಆಯುರ್ವೇದ ಔಷಧದಿಂದ ಪತ್ನಿ ಮೃತಪಟ್ಟಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಅವಿನಾಶ್ ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
15/11/2021 10:46 am