ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಭಿಕ್ಷುಕಿ ಮೇಲೆ ರೇಪ್, ಕೊಲೆ- ಬೀದಿ ಬದಿ ವ್ಯಾಪಾರಿ ಅರೆಸ್ಟ್

ಚಿಕ್ಕಬಳ್ಳಾಪುರ: 40 ವರ್ಷದ ಭಿಕ್ಷುಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಬೀದಿ ಬದಿ ವ್ಯಾಪಾರಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ಲಾ (24) ಬಂಧಿತ ಬೀದಿ ಬದಿ ವ್ಯಾಪಾರಿ. ನಗರದ ಮೀನು ಮಾಂಸದ ಮಾರುಕಟ್ಟೆ ಬಳಿ ಗುರುವಾರ ರಾತ್ರಿ ಅಬ್ದುಲ್ ಭಿಕ್ಷುಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಇತನನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಬ್ದುಲ್ಲಾ ತಳ್ಳುಗಾಡಿಯಲ್ಲಿ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ. ಹಲವು ದಿನಗಳಿಂದ ಭಿಕ್ಷುಕಿ ನಗರದ ಮೀನು ಮಾಂಸದ ಮಾರುಕಟ್ಟೆ ಪ್ರದೇಶದಲ್ಲಿ ಇದ್ದರು. ಭಿಕ್ಷೆ ಬೇಡಿದ ನಂತರ ಇಲ್ಲಿಗೆ ಬಂದು ಮಲಗುತ್ತಿದ್ದರು. ಅಬ್ದುಲ್ಲಾ ಭಿಕ್ಷುಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಿಕ್ಷುಕಿಯ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

Edited By : Vijay Kumar
PublicNext

PublicNext

13/11/2021 05:31 pm

Cinque Terre

29.81 K

Cinque Terre

10

ಸಂಬಂಧಿತ ಸುದ್ದಿ