ಬೆಂಗಳೂರು: ಓರ್ವ ಪೊಲೀಸ್ ಅಧಿಕಾರಿ ಹಾಗೂ ಕಾನ್ಸ್ಟೇಬಲ್ ನಡುವೆ ನಡೆದಿದೆ ಎನ್ನಲಾಗುತ್ತಿರುವ ಸಂಭಾಷಣೆಯ ಆಡಿಯೋ ರೆಕಾರ್ಡ್..
ಆ ಆಡಿಯೋದಲ್ಲಿರುವ ಸಂಭಾಷಣೆಯ ಕಂಪ್ಲೀಟ್ ಡೀಟೈಲ್ ಇಲ್ಲಿದೆ.
ಕಾನ್ಸ್ಟೇಬಲ್; ಸರ್ ಅದು…ಪ್ಲೆಕ್ಸಿಯೇಟ್ ಆಗ್ತಾ ಇರುತ್ತೆ ಸರ್
ಐಪಿಎಸ್ ; ಹ್ಞಾಂ…
ಕಾನ್ಸ್ಟೇಬಲ್; ಫ್ಲೆಕ್ಸಿಯಟ್ ಆಗ್ತಾ ಇರುತ್ತೆ
ಐಪಿಎಸ್; ಅಲ್ಲಾ… ಅಂದಾಜು ಇವತ್ ಬಿಟ್ರೆ ಎಷ್ಟು..?
ಕಾನ್ಸ್ಟೇಬಲ್; ಈಗ ಒಂದ್ ಬಿಟ್ ಕಾಯಿನ್ಗೆ 56 ಲಕ್ಷ ಇದೆ. ಅದರಲ್ಲೂ ವೆರಿಟೀಸ್ ಇದೆ ಸಾರ್. 30 ಲಕ್ಷ ಇದೆ. ಇಟ್ ಡಿಪೆಂಡ್ಸ್ ಸರ್
ಐಪಿಎಸ್; ಹಂಗಾದ್ರೆ….ಅವ್ನ ಅಕೌಂಟ್ನಿಂದ ಬೇರೆ ಯಾರಿಗಾದ್ರೂ ಹೋಗಿದ್ಯಾ… ಹಣ ಎಲ್ಲಾ…ಬಿಟ್ ಕಾಯಿನ್ನು ?
ಕಾನ್ಸ್ಟೇಬಲ್; ಹೋಗಿದೆ ಸರ್….ದೊಡ್ಡವರಿಗೆ ಸುಮಾರ್ ಜನ್ರಿಗೆ ಟ್ರಾನ್ಸಾಕ್ಷನ್ ಅದ್ರಲ್ಲೇ ಮಾಡಿರೋದು
ಐಪಿಎಸ್; ಯಾರಂತ ಗೊತ್ತಿಲ್ಲ ನಿನಗೆ
ಕಾನ್ಸ್ಟೇಬಲ್; ಅರ್ಧಂಬರ್ದ ಗೊತ್ತಿದೆ..ಪೂರ್ತಿ ಗೊತ್ತಿಲ್ಲ …ಎಲ್ಲಾ ದೊಡ್ಡೋರೇ ಇರೋದು
ಐಪಿಎಸ್; ಯಾರ್ಯಾರು ಇದಾರೆ ಅಂದಾಜು
ಕಾನ್ಸ್ಟೇಬಲ್; ಮಿನಿಸ್ಟರ್ ಲೆವೆಲ್ನಲ್ಲಿದಾರೆ…ಮಿನಿಸ್ಟರ್ ಲೆವೆಲ್…
ಐಪಿಎಸ್; ಹೋಂ ಮಿನಿಸ್ಟರ್ ಇದಾರಾ ..
ಕಾನ್ಸ್ಟೇಬಲ್; ಅಲ್ಲಲ್ಲ ಬೇರೆ ಮಿನಿಸ್ಟರ್ಗಳು ಇದಾರೆ…ಐಪಿಎಸ್ ಇದಾರೆ..
ಐಪಿಎಸ್; ಐಪಿಎಸ್ ಗಳು ಅಂದ್ರೆ ಯಾರ್ಯಾರು ಅಂದಾಜು
ಕಾನ್ಸ್ಟೇಬಲ್; ಹೆಸರು ಗೊತ್ತಿಲ್ಲ ಸರ್
ಐಪಿಎಸ್; ಆಯ್ತು ಬಿಡಪ್ಪ (ನಗುತ್ತ….) ಒಟ್ನಲ್ಲಿ ಅಂತೂ ಆಗಿದೆ…
ಕಾನ್ಸ್ಟೇಬಲ್; ಆಗಿದೆ ಆಗಿದೆ ಸರ್..ಆಗಿರೋದಕ್ಕೆ…..ಏಯ್ಟೀನ್ನಲ್ಲೇ ಆಗಿರೋದು..
ಐಪಿಎಸ್; ನೆನ್ನೆ ಮೊನ್ನೆ ಶರತ್ ಅವರನ್ನು ಕರೆದಿದ್ರಾ….ಇವ್ರ ಬಗ್ಗೆ
ಕಾನ್ಸ್ಟೇಬಲ್; ಇವ್ರು ಇಂಟಲಿಜೆನ್ಸ್ ಹೋಗಿದ್ರು….ಇಂಟ್ಗೆ…ಇಂಟ್ಗೆ….
ಐಪಿಎಸ್; ಯಾರು?
ಕಾನ್ಸ್ಟೇಬಲ್; ಶರತ್ ಅವರು, ಈಗ ಟೂ ಟು ತ್ರೀ ಡೇಸ್ ಬ್ಯಾಕ್, ದಯಾನಂದ್ ಸಾಹೇಬ್ರು ಫುಲ್ ಅವುಂದು ಮಾಹಿತಿ ತಗೊಂಡು…
ಐಪಿಎಸ್; ಎನ್ಕ್ವೈಯರಿ ಅದೇ…ಅದ್ರ ಬಗ್ಗೆ ಕೇಳೋಕ್ಕೆ….ಅಷ್ಟೇನಾ…
ಕಾನ್ಸ್ಟೇಬಲ್; ನಂದ್ ಎಲ್ಲಾ ಸರಿ ಇದೆ…ಕಟ್ ಅಂಡ್ ಕ್ಲಿಯರ್ ಇದೆ
ಐಪಿಎಸ್; ನೀವು ಈ ಕೇಸ್ನಲ್ಲಿ ಐಎ… ? ಏನ್ ಸೆಕ್ಷನ್ ಹಾಕಿದೀರಿ…
ಕಾನ್ಸ್ಟೇಬಲ್; 66 ಸಿ ಅದು ಮಾಮೂಲಿ ಬೇರೇನೂ ಇಲ್ಲ
ಐಪಿಎಸ್; ಅದೇನ್ ಬೇಲೇಬಲ್ ಅಲ್ವಾ…
ಕಾನ್ಸ್ಟೇಬಲ್; ಹೌದು ಸಾರ್ ಬೇಲ್ ಆಯ್ತಲ್ಲ…2-3 ತಿಂಗ್ಳು ಇದ್ದ ಒಳಗೇ…
ಐಪಿಎಸ್; ಬರೀ 66 ಸಿ ಗೆ ಮೂರ್ ತಿಂಗ್ಳು ಇಟ್ಕೋಳ್ತಾರಾ
ಕಾನ್ಸ್ಟೇಬಲ್; ಆ ಮೇಲೆ 72 ಎ ಅದೇ ಹ್ಯಾಕಿಂಗ್…ಅಂದ್ ಬಿಟ್ಟು….. ಸಿಸಿಬಿ ಅವರು ಡ್ರಗ್ಸ್ ಕೇಸ್ನಲ್ಲಿ ಹಾಕ್ಕೊಂಡಿದ್ರು
ಐಪಿಎಸ್; ಡ್ರಗ್ಸ್ ಕೇಸ್ ಮೋಸ್ಟಲಿ ಬೇಲ್ ಇದಾಗಿರಬೇಕು. ಅದೇನ್ ಐ ಟಿ ಆಕ್ಟ್ ಅದೇನ್ ವೇಸ್ಟ್… ಬೇಲೇಬಲ್
ಕಾನ್ಸ್ಟೇಬಲ್; ಬಟ್ ಈ ಕೇಸ್ನಲ್ಲಿ ಕೊಟ್ಟಿರಲಿಲ್ಲ..3 ತಿಂಗ್ಳಿದ್ದ
ಐಪಿಎಸ್; ಈಗೇನ್ ಚಾರ್ಜ್ಶೀಟ್ ಆಯ್ತಾ……ಐ ಓ ಯಾರು?
ಕಾನ್ಸ್ಟೇಬಲ್; ಶರತ್ ಸಾರ್… ಈಗ ಸದ್ಯಕ್ಕೆ ಕೃಷ್ಣಕುಮಾರ್
ಐಪಿಎಸ್; ಡಿಐಜಿ ನಾ
ಕಾನ್ಸ್ಟೇಬಲ್; ಇಲ್ಲಾ ಸಾರ್ ಇನ್ಸ್ಪೆಕ್ಟರ್
ಐಪಿಎಸ್; ಆಯ್ತ್….ಏನಾದ್ರೂ ಇದ್ರೆ ಕೇಳ್ತೀನಿ…ಅದೇನೋ ಕೇಳ್ಪಟ್ಟೆ…
ಕಾನ್ಸ್ಟೇಬಲ್; ಏನಾದ್ರೂ ಇದ್ರೆ ಹೇಳ್ತೀನಿ…ಸಾರ್..ತಮ್ಮದೇನೂ ಹೆಸ್ರಿಲ್ಲ…
ಐಪಿಎಸ್; ಥ್ಯಾಂಕ್ಯೂ…..
PublicNext
13/11/2021 09:34 am