ಹೈದರಾಬಾದ್ : ಮುತ್ತಿನ ನಗರಿ ಹೈದರಾಬಾದ್ ಹೊರವಲಯದ LB ನಗರ ಪ್ರದೇಶದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಯುವತಿ ಪ್ರಿಯಕರನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಂತೆ ಆಕೆಯನ್ನು 18 ಬಾರಿ ಚಾಕುವಿನಿಂದ ಇರಿದು ಆಸ್ಪತ್ರೆ ಪಾಲು ಮಾಡಿದ್ದಾನೆ.
ಹೌದು ಸಂತ್ರಸ್ತೆ ಮದುವೆಯಾಗಲು ನಿರಾಕರಿಸಿದ ಕಾರಣ ಬಸವರಾಜ್ ಎಂಬ 23 ವರ್ಷದ ವ್ಯಕ್ತಿ ಮಹಿಳೆಗೆ 18 ಬಾರಿ ಇರಿದಿದ್ದಾನೆ. ಈ ಪ್ರಕರಣ ಕೇಳಿ ಮುತ್ತಿನ ನಗರಿ ಹೈದರಾಬಾದ್ ಬೆಚ್ಚಿ ಬಿದ್ದಿದೆ.
ಸದ್ಯ 20 ವರ್ಷದ ಶಿರೀಶಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಗ್ರೇಟರ್ ಹೈದರಾಬಾದ್ ನ ಹಸ್ತಿನಾಪುರಂನ ಯುವತಿಯ ಸಂಬಂಧಿಕರ ನಿವಾಸದಲ್ಲಿ ಈ ದಾರುಣ ಘಟನೆ ನಡೆದಿದೆ. ಆರೋಪಿ ಮಹಿಳೆಯ ಗೆಳೆಯ ಎನ್ನಲಾಗಿದೆ. ತನ್ನನ್ನು ಮದುವೆಯಾಗಲು ನಿರಾಕರಿಸಿ, ಕೆಲ ತಿಂಗಳ ಹಿಂದೆ ಶ್ರೀಧರ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಆರೋಪಿ ಬಸವರಾಜ ಮಹಿಳೆಯ ಮೇಲೆ ಕೋಪಗೊಂಡಿದ್ದ, ದ್ವೇಷ ಹೊಂದಿದ್ದ ಎಂದು ತಿಳಿದುಬಂದಿದೆ.
ಸದ್ಯ ಬಸವರಾಜ್ ನನ್ನು ವಶಕ್ಕೆ ಪಡೆದ ಪೊಲೀಸ್ ಐಪಿಸಿ ಸೆಕ್ಷನ್ 307 ಕೊಲೆ ಯತ್ನ ಮತ್ತು ಇತರ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
13/11/2021 07:34 am