ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಕೆ ಮಾಡಿದ ಪುಂಡಾಟಿಕೆ ಒಂದಾ ಎರಡಾ?: ಸೂರತ್‌ನಲ್ಲಿದ್ದಾಳೆ ಲೇಡಿ ರೌಡಿ

ಸೂರತ್(ಗುಜರಾತ್): ನೋಡಲು ಹಾಲುಗಲ್ಲದ ಚೆಂದುಳ್ಳಿ ಚೆಲುವೆಯಾಗಿರುವ ಈಕೆಗೆ ಇನ್ನೊಂದು ಕರಾಳ ಮುಖವಿದೆ. ಈಕೆ ಸದ್ಯ ಸೂರತ್‌ ನಗರದ ಲೇಡಿ ಡಾನ್ ಎಂದೇ ಕುಖ್ಯಾತಿ ಹೊಂದಿದ್ದಾಳೆ. ಅಪರಾಧ ಹಿನ್ನೆಲೆ ಹೊಂದಿರುವ ಈಕೆ ಕೇವಲ 23ನೇ ವಯಸ್ಸಿಗೆ ಪೊಲೀಸರಿಗೆ ತಲೆನೋವಾಗಿದ್ದಾಳೆ.

ಈಕೆಯ ಹೆಸರು ಅಸ್ಮಿತಾ ಬಾ ಗೋಹಿಲ್ ಅಲಿಯಾಸ್ ದಿಕು. ಓದುವ ವಯಸ್ಸಿನಲ್ಲೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡ ಈಕೆ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಸಾರ್ವಜನಿಕರನ್ನು ಬೆದರಿಸುವ ಮೂಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯಳಾಗಿರುವ ದಿಕು ಫ್ಯಾನ್ಸಿ ಕಾರು, ಬೈಕ್‌ಗಳ ಮೇಲೆ ಕುಳಿತು ಪೋಸ್ ಕೊಟ್ಟ ಫೋಟೋಗಳನ್ನು ಪೋಸ್ಟ್‌ ಮಾಡುತ್ತಾಳೆ. ಅಷ್ಟೇ ಅಲ್ಲ, ರಿವಾಲ್ವರ್, ಖಡ್ಗ, ಬ್ಲೇಡ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹಿಡಿದ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾಳೆ.

ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿರುವ ಈಕೆ ಕೈಯಲ್ಲಿ ಚಾಕು ಹಿಡಿದು ಜನರ ಮಧ್ಯೆ ನುಗ್ಗುತ್ತಾಳೆ. ಈಕೆಯ ಕ್ರೈಂ ಪಾರ್ಟ್‌ನರ್ ಸಂಜಯ್ ಭುವಾ ಎಂಬಾತನೂ ಎರಡು ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿ. ಈಕೆ ಸೂರತ್‌ನ ವರಚ್ಛ ಏರಿಯಾದಿಂದ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದ ವೀಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಲೇಡಿ ಡಾನ್ ದಿಕು ಮೇಲೆ ಅನೇಕ ಪ್ರಕರಣಗಳಿವೆ. ಆದರೂ ಆಕೆ ತನ್ನ ಅಪರಾಧ ಕೃತ್ಯಗಳನ್ನು ನಿಲ್ಲಿಸಿಲ್ಲ.

Edited By : Nagaraj Tulugeri
PublicNext

PublicNext

12/11/2021 12:28 pm

Cinque Terre

37.67 K

Cinque Terre

1