ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆ ಕೊಠಡಿಯಲ್ಲಿ ಕಳ್ಳನೊಬ್ಬನು ರೋಗಿಯಂತೆ ಸೋಗಿನಲ್ಲಿ ಬಂದು ನಿಜವಾದ ರೋಗಿಯ ಮೊಬೈಲ್ ಕದ್ದಿದ್ದಾನೆ.
ಘಟನೆಯ ವಿಡಿಯೋ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾತ್ರಿ ವೇಳೆ ರೋಗಿಯಂತೆ ಬಂದ ಖದೀಮ ರೋಗಿ ಮಲಗಿದ್ದ ಪಕ್ಕದ ಇನ್ನೊಂದು ಬೆಡ್ ಮೇಲೆ ಮಲಗಿದ್ದಾನೆ. ನಂತರ ಕೆಲಹೊತ್ತು ಪಕ್ಕದ ರೋಗಿ ಗಾಢನಿದ್ರೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಮೊಬೈಲ್ ಫೋನ್ ಕದ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
PublicNext
12/11/2021 09:50 am