ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ನಡುಕ ಹುಟ್ಟಿಸಿದ ಕಲ್ಲು : ಈ ಕಲ್ಲಿನಲ್ಲಿ ಏನಿದೆ?..

ಹುಬ್ಬಳ್ಳಿ: ಇಲ್ಲಿನ ದುರ್ಗದ ಬೈಲ್ ನಲ್ಲಿ ಹೊಳೆಯುವ ಕಲ್ಲುಗಳನ್ನು ತಂದು ಇದರಲ್ಲಿ ಬಂಗಾರ ಇದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿತನಿಂದ 1.35 ಲಕ್ಷ ರೂ. ಮೌಲ್ಯದ 1039 ಗ್ರಾಂ ತೂಕದ 9 ಸ್ಟೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಕೊಪ್ಪಳದ ವಿದ್ಯಾನಗರ ನಿವಾಸಿ ಮೌನೇಶ ಶಿವಪ್ಪ ಅರ್ಕಾಚಾರಿ ಬಂಧಿತ ಆರೋಪಿ, ಇಲೆಕ್ಟಿಕ್ ಕೆಲಸ ಮಾಡಿಕೊಂಡಿರುವ ಮೌನೇಶ ದುರ್ಗದ ಬೈಲ್ ಗೆ ಬಂದಿದ್ದ. ಹೊಳೆಯುವ ಸ್ಟೋನ್ ಗಳನ್ನು ತಂದು ಇದರಲ್ಲಿ ಬಂಗಾರ, ಬೆಳ್ಳಿ ಇದೆ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿದ ಇನ್ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಕಲ್ಲನ್ನು ಆರೋಪಿ ‘ಕ್ಯಾಲಿಫೋರ್ನಿಯಂ’ ಎಂದು ಹೇಳುತ್ತಿದ್ದ. ಈ ವಿಚಾರ ತಿಳಿದ ಪೊಲೀಸರು ಆಯುಕ್ತರು ‘ಅದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು); ಅದನ್ನು ಬರಿಗೈಲಿ ಮುಟ್ಟಬೇಡಿ; ಮರಳಿನಲ್ಲಿ ಮುಚ್ಚಿ ಇಡಿ’ ಎಂದು ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು. ಆ ಕಲ್ಲನ್ನು ಮುಟ್ಟಿದ್ದ ಪೊಲೀಸರಲ್ಲಿ ಎದೆಯಲ್ಲಿ ಢವಢವ ಶುರಶುರುವಾಗಿತ್ತು. ಕ್ಯಾಲಿಫೋರ್ನಿಯಂ ಕುರಿತು ಗೂಗಲ್ ಲ್ಲಿ ಹುಡುಕಾಡಿ ಅದರ ಶಕ್ತಿ ಬಗ್ಗೆ ತಿಳಿದುಕೊಂಡ ಪೊಲೀಸರು ಮತ್ತಷ್ಟು ಬೆಚ್ಚಿ ಬಿದ್ದರು.

ಕ್ಯಾಲಿಫೋರ್ನಿಯಂ ಎಂಬುದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು). ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹ. ಇದು ಯುರೇನಿಯಂ ನಂತರ ಅತಿ ಹೆಚ್ಚು ಪರಮಾಣು ಸಂಖ್ಯೆಯನ್ನು ಹೊಂದಿದೆ.

ಈ ಕಾರಣಗಳಿಗಾಗಿ ಮಾರುಕಟ್ಟೆಯ ಮೌಲ್ಯ ಹೆಚ್ಚಾಗಿದೆ. ಇದನ್ನು ಬರಿಗೈಲಿ ಮುಟ್ಟಿದರೆ ಕ್ಯಾನ್ಸರ್ ನಂಥ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಹೀನತೆ ಆಗುವ ಸಾಧ್ಯತೆ ಇದೆ. 1950ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಲಾರೆನ್ಸ್ ರ್ಬಕೆಲಿ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಇದನ್ನು ಸಂಶೋಧಿಸಲಾಗಿತ್ತು. ಹಾಗಾಗಿ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ನಾಮಕರಣ ಮಾಡಲಾಗಿದೆ. 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂ. ಎನ್ನಲಾಗುತ್ತಿದೆ.

ಕೊಪ್ಪಳದ ಕ್ವಾರಿಯೊಂದರಲ್ಲಿ ಈ ಹೊಳೆಯುವ ಕಲ್ಲುಗಳು ಸಿಕ್ಕಿದ್ದವು ಎಂದು ಮೌನೇಶ ಒಪ್ಪಿಕೊಂಡಿದ್ದಾನೆ. ಆದರೆ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ಯಾಕೆ ಹೇಳಿದ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಶಹರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By : Nirmala Aralikatti
PublicNext

PublicNext

10/11/2021 05:38 pm

Cinque Terre

39.23 K

Cinque Terre

3