ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರೆಸ್ಟ್ ಮಾಡಿ ಸುಲಿಗೆಗೆ ಪ್ಲ್ಯಾನ್ ಹಾಕಿದ್ರಾ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ?

ಮುಂಬೈ: ಬಾಲಿವುಡ್ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಸ್ಟಾರ್​ ಪುತ್ರನನ್ನುಅರೆಸ್ಟ್ ಮಾಡಿ ನಂತರ ಸುಲಿಗೆಗೆ ಪ್ಲ್ಯಾನ್ ಹಾಕಲಾಗಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆರ್ಯನ್ ಖಾನ್ ನಶೆ ಕೇಸ್‌ ತನಿಖೆಯಿಂದ ಸಮೀರ್​ ವಾಂಖೆಡೆ ಅವರನ್ನು ಹೊರಗಿಡಲಾಗಿದೆ. ಇನ್ಮುಂದೆ ಈ ಪ್ರಕ್ರಣದ ತನಿಖೆಯನ್ನು ಕೇಂದ್ರದ ಉನ್ನತ ತಂಡವೇ ನಡೆಸಲಿದೆ.

ಆರ್ಯನ್​ ಖಾನ್​ ಭಾಗಿಯಾಗಿದ್ದರು ಎನ್ನಲಾದ ರೇವ್​ ಪಾರ್ಟಿ ಮೇಲೆ ದಾಳಿ ನಡೆದ ದಿನ ಎನ್​ಸಿಬಿ ಅಧಿಕಾರಿಗಳ ಜೊತೆ ಖಾಸಗಿ ಡಿಟೆಕ್ಟೀವ್​ ಕಿರಣ್​ ಗೋಸಾವಿ ಮತ್ತು ಅವರ ಬಾಡಿಗಾರ್ಡ್​ ಪ್ರಭಾಕರ್​ ಸೈಲ್​ ಕೂಡ ಹಾಜರಿದ್ದರು. ಇವರಿಬ್ಬರು ಪ್ರಮುಖ ಸಾಕ್ಷಿಗಳಾಗಿದ್ದಾರೆ. ಆದರೆ ದಾಳಿ ಬಳಿಕ ಕಿರಣ್​ ಗೋಸಾವಿ ನಾಪತ್ತೆ ಆಗಿದ್ದರು. ಈಗ ಅವರು ಪುಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡರು ಮತ್ತು ಬಹುಕೋಟಿ ಡೀಲ್​ ಬಗ್ಗೆ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ ಎಂದು ಪ್ರಭಾಕರ್​ ಸೈಲ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ಜೊತೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಮುಖಂಡ ನವಾಬ್​ ಮಲಿಕ್​ ಕೂಡ ಸಮೀರ್​ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಇವುಗಳ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರವು ತನಿಖೆ ನಡೆಸಲು ವಿಶೇಷ ತಂಡ ರಚಿಸಿದೆ.

Edited By : Nagaraj Tulugeri
PublicNext

PublicNext

06/11/2021 01:29 pm

Cinque Terre

40.92 K

Cinque Terre

2