ತ್ರಿಶೂರ್:ಮದುವೆ ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತದಂತೆ. ಹಾಗೆ ಮದುವೆ ಆದವರೂ ಎಂದೂ ದೂರ ಆಗೋದಿಲ್ವಂತೆ. ಆದರೆ ಈಗ ಇದನ್ನ ನಂಬೋ ಹಾಗಿಲ್ಲ. ಮದುವೆ ಆಗಿ ಮರು ದಿನವೇ ಓಡಿ ಹೋದವರಿದ್ದಾರೆ. ತ್ರಿಶೂರ್ ನಲ್ಲಿ ಅದೇ ಆಗಿದೆ. ಓಡಿ ಹೋದದ್ದು ವಧು.ಓಡಿ ಹೋಗಿದ್ದು ಮಾತ್ರ ಮತ್ತೊಬ್ಬ ಹುಡುಗಿಯ ಜೊತೆಗೇನೆ. ಏನ್ ಇದು ಹಿಂಗಿದೆ ಸ್ಟೋರಿ ಅಂತಿರೋ. ಇಲ್ಲಿದೆ ನೋಡಿ ವಿವರ.
ಮದುವೆ ಆದ ಮರು ದಿನವೇ ಹುಡುಗಿ ಓಡಿ ಹೋಗಿದ್ದಾಳೆ. ಇದರಿಂದ ಗಂಡನಿಗೆ ಹೃದಯಾಗಾತ ಆಗಿದೆ.ಗಂಡನನ್ನ ಆಸ್ಪತ್ರೆಗೂ ದಾಖಲಿಸಲಾಗಿದೆ.
ಆದರೆ ಪತ್ನಿ ಓಡಿ ಹೋಗಿದ್ದು ತನ್ನ ಗೆಳೆತಿಯ ಜೊತೆಗೆ. ಇದ್ಯಾವ ರೀತಿ ಸಂಬಂಧವೋ ಏನೋ. ಇಬ್ಬರೂ ಓಡಿ ಹೋಗಿದ್ದಾರೆ. ಇವರು ಮೊದಲು ರೈಲು ಟಿಕೆಟ್ ಬುಕ್ ಮಾಡಿ ಚೆನ್ನೈಗೆ ಹೋಗೋರಿದ್ದರು. ಸಿಕ್ಕಿ ಬೀಳೋದರಿಂದಲೇ ಬಸ್ ಮೂಲಕ ಕೊಟ್ಟಾಯಂಗೆ ತೆರಳಿದ್ದಾರೆ. ಅಲ್ಲಿಂದ ಚೆನ್ನೈಗೆ ಟ್ರೈನ್ ಮೂಲಕ ತಲುಪಿದ್ದಾರೆ.
ಚೆನ್ನೈನ ಹೋಟೆಲ್ ನಲ್ಲಿ ಈ ಹುಡುಗಿಯರು ರೂಮ್ ಮಾಡಿಕೊಂಡಿದ್ದರು. ಪತಿಯ ದೂರಿನ ಆಧಾರದ ಮೇಲೇನೆ ಪೊಲೀಸರು ಇವರನ್ನ ಮಧುರೈನಲ್ಲಿ ಪತ್ತೆ ಹಚ್ಚಿದ್ದಾರೆ. ಹುಡುಗಿಯನ್ನೂ ವಾಪಸ್ ಗಂಡನ ಮನೆಗೂ ತಂದು ಬಿಟ್ಟಿದ್ದಾರೆ. ವಿಷಯ ಏನಪ್ಪ ಅಂದ್ರೆ,ಮದುವೆಯಾದ ಹುಡುಗಿ ಜತೆಗೆ ಓಡಿ ಬಂದ ಗೆಳೆತಿಗೂ ಇತ್ತೀಚಿಗೆ ಮದುವೆ ಆಗಿದ್ದಳು. ಅವಳೂ ಕೂಡ ಆಭರಣಕ್ಕಾಗಿಯೇ ಮದುವೆ ಆಗಿ,ಆಭರಣದೊಂದಿಗೇನೆ ಇಲ್ಲಿಗೆ ಓಡಿ ಬಂದಿದ್ದಾಳೆ.
PublicNext
04/11/2021 10:26 am