ಗದಗ: 3 ತಿಂಗಳ ಮಗುವನ್ನು ಕೊಂದು ದಂಪತಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡದಲ್ಲಿ ನಡೆದಿದೆ.
ಗ್ರಾಮದ ಹೊರವಲಯದ ಜಮೀನಲ್ಲಿದ್ದ ಮನೆಯಲ್ಲಿ ಮಲ್ಲಪ್ಪ ಗಡಾದ (25) ಹಾಗೂ ಸುಧಾ (22) ತಮ್ಮ ಮೂರು ತಿಂಗಳ ಮಗಳು ರೂಪಾಶ್ರೀಯನ್ನು ಕೊಂದು, ಬಳಿಕ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಕಳೆದ 2 ವರ್ಷದ ಹಿಂದೆ ಮಲ್ಲಪ್ಪ ಹಾಗೂ ಸುಧಾ ಮದುವೆಯಾಗಿದ್ದರು. ಆದರೆ ನಿನ್ನೆ (ಬುಧವಾರ) ರಾತ್ರಿ ಮನೆ ಹಾಲ್‌ನಲ್ಲಿ ಮಲ್ಲಪ್ಪ, ಬೆಡ್ ರೂಮ್‌ನಲ್ಲಿ ಸುಧಾ ಹಾಗೂ ರೂಪಾಶ್ರೀ ನೇಣಿಗೆ ಕೊರಳೊಡ್ಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
04/11/2021 07:38 am