ಧಾರವಾಡ:ಇಲ್ಲಿಯ ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಯು. ಬಿ.ಶೆಟ್ಟಿ ಮನೆ ಮೇಲೆ ಮೊನ್ನೆ ಐಟಿ ದಾಳಿ ನಡೆಸಿತ್ತು.ಯು.ಬಿ.ಶೆಟ್ಟಿ ಸಹೋದರ ಸೀತಾರಾಮ್ ಶೆಟ್ಟಿ ಮನೆ ಮೇಲೂ ಐಟಿ ರೇಡ್ ಮಾಡಿತ್ತು. ಈ ರೇಡ್ ನಿಂದ ಬರೋಬ್ಬರಿ 70 ಕೋಟಿಯಷ್ಟು ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಈಗ ತೆರಿಗೆ ಇಲಾಖೆ ಹೇಳಿದೆ.
ಯು.ಬಿ.ಶೆಟ್ಟಿ ಅವರಿಗೆ ಸಂಬಂಧಿಸಿದ ಅಕ್ಟೋಬರ್-28 ಮತ್ತು29 ರಂದು ಐಟಿ ರೇಡ್ ಮಾಡಿತ್ತು. ಯು.ಬಿ.ಶೆಟ್ಟಿ ಹಾಗೂ ಸೀತಾರಾಮ್ ಶೆಟ್ಟಿ ಆಸ್ತಿ ಎಲ್ಲೆಲ್ಲ ಇದೆಯೋ ಅಲೆಲ್ಲ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇವರೊಟ್ಟಿಗೆ ವ್ಯವಹಾರ ನಂಟು ಇರೋರ ಸ್ಥಳದಲ್ಲೂ ಶೋಧ ನಡೆಸಿದ್ದಾರೆ. ಇದರಿಂದ 70 ಕೋಟಿ ಅಘೋಷಿತ ವರಮಾನ ಪತ್ತೆಯಾಗಿದೆ ಎಂದು ಆದಾಯ ಇಲಾಖೆ ತಿಳಿಸಿದೆ.
PublicNext
03/11/2021 10:36 pm