ಬಾಗಲಕೋಟೆ : ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಕೃತಿಕ ಎಂಬ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಬಾಗಲಕೋಟೆ ನವನಗರದ 61ನೇ ಸೆಕ್ಟರ್ ನಲ್ಲಿ ನಡೆದಿದೆ. ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾರಲ್ಲಿ ಬಂದ ಅಪರಿಚಿತರುವ ಏಕಾಏಕಿ ಅಪಹರಿಸಿದ್ದಾರೆ. ಇನ್ನು ಕಿಡ್ನ್ಯಾಪ್ ಮಾಡಿದ ಕಿರಾತಕರು 50 ಲಕ್ಷ ರೂ. ಹಣಕ್ಕೆ ಬೇಡಿಕೆಇಟ್ಟಿದ್ಧಾರೆ.
ಇನ್ನು ಮಗಳನ್ನು ಅಪಹರಿಸಿದ ಕುರಿತು ನವನಗರದ ಠಾಣೆಗೆ ಬಾಲಕಿ ತಾಯಿ ಸುನಿತಾ ದೂರು ನೀಡಿದ್ದು, ಸ್ಥಳಿಯರು ಕೃತಿಕಾ ಮಾವ ಅನಿಲ್ ಬಾಡಗಂಡಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ನವನಗರ ಠಾಣೆ ಪೊಲೀಸರಿಂದ ಬಾಲಕಿಗಾಗಿ ಶೋಧಕಾರ್ಯ ಮುಂದುವರೆದಿದೆ.
PublicNext
28/10/2021 10:24 am