ಕೋಲಾರ: ಯಾಕಿಷ್ಟು ಮನಸ್ಸುಗಳು ದುರ್ಬಲಗೊಳ್ಳುತ್ತಿವೆಯೋ ಗೊತ್ತಿಲ್ಲ. ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಇಲ್ಲೊಬ್ಬ ವಿದ್ಯಾರ್ಥಿ ತಾನು ಸಾಯುವುದಾಗಿ ತಿಳಿಸಿ, ತನ್ನ ಬ್ಯಾನರ್ ಹಾಕಿ ಮಿಸ್ ಯು ಫ್ರೆಂಡ್ಸ್ ಎಂದು ಸ್ನೇಹಿತರ ವಾಟ್ಸ್ ಆ್ಯಪ್ ಗ್ರೂಪ್ ಗೆ ಮೆಸೇಜ್ ಕಳುಹಿಸಿ ಪ್ರಾಣ ಬಿಟ್ಟಿದ್ದಾನೆ.
ಇನ್ನು ಇಂತಹ ದುರ್ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ. ಕಿಶೋರ್ ಕುಮಾರ್ (17) ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ವಿದ್ಯಾರ್ಥಿ.
ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಿಶೋರ್ ನ ಮೆಸೇಜ್ ನೋಡಿದ ಗೆಳೆಯರು, ‘ಯಾಕೋ ಹೀಗೆಲ್ಲ ಹೇಳ್ತಿಯಾ? ಕಾಲೇಜಿಗೆ ಬಾರೋ’ ಎಂದು ರಿಪ್ಲೈ ಮಾಡಿದ್ದು, ಆನಂತರ ಕಿಶೋರ್ ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗಲೇ ಕಿಶೋರ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾನೆ.
ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
27/10/2021 01:01 pm