ಕಲಬುರಗಿ: ನಿನ್ನೆಯಷ್ಟೇ ನಡೆದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಬ್ಲೂ ಟೂತ್ ಮೂಲಕ ಉತ್ತರ ಬರೆಯಲು ಪ್ಲಾನ್ ಮಾಡಿದ್ದ ಕಲಬುರಗಿಯ ಮೂವರು ಅಭ್ಯರ್ಥಿಗಳು ಸೇರಿದಂತೆ 11 ಜನರನ್ನು ಅರೆಸ್ಟ್ ಮಾಡಲಾಗಿದೆ.
ಅಭ್ಯರ್ಥಿಗಳಾದ ರಾಜಕುಮಾರ್, ಪೀರಪ್ಪ, ಮಾಳಪ್ಪ ಸೇರಿ 11 ಮಂದಿಯನ್ನು ಬಂಧಿಸಲಾಗಿದೆ. ನಗರದ ಪ್ರೀತಂ ಲಾಡ್ಜಲ್ಲಿ ಕುಳಿತು ಸ್ಕೆಚ್ ಹಾಕುತ್ತಿದ್ದ ಕಿಲಾಡಿ ಗ್ಯಾಂಗ್ ನ ಯುವಕರು,
ಬನಿಯನ್ ಒಳಗೆ ಡಿವೈಸ್ ಇಟ್ಕೊಂಡು ಪರೀಕ್ಷೆಗೆ ಹೋಗಲು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿಕೊಂಡಿದ್ದರು.
ಒಬ್ಬ ಅಭ್ಯರ್ಥಿಯ ಒಂದು ಡಿವೈಸ್ ಬನಿಯನ್‌ಗೆ 5 ಲಕ್ಷ ರೂಪಾಯಿ ನಿಗದಿ ಮಾಡಿದ್ದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ತಿಳಿದ ಅಪರಾಧ ವಿಭಾಗ ಪೊಲೀಸರ ತಂಡದಿಂದ ಅಕ್ಟೋಬರ್ 23 ರಂದೇ ದಾಳಿ ನಡೆಸಿ ದಂಧೆ ಬಯಲು ಮಾಡಿದ್ದಾರೆ. ಹಾಗೂ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಮತ್ತು ತಲೆಮರೆಸಿಕೊಂಡಿರುವ ಈ ದಂಧೆಯ ಕಿಂಗ್‌ಪಿನ್ ಖತರ್ನಾಕ್ ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
PublicNext
25/10/2021 04:46 pm