ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಡ ಸೈಕಲ್ ರಿಕ್ಷಾವಾಲಾಗೆ ಮಹಾ ಧೋಖಾ:3 ಕೋಟಿ ಟ್ಯಾಕ್ಸ್ ಕಟ್ಟಬೇಕಂತೆ ಈ ರಿಕ್ಷಾವಾಲಾ

ಮಥುರಾ: ಕೃಷ್ಣನ ಊರಿನಲ್ಲಿಯೇ ಸೈಕಲ್ ರಿಕ್ಷಾವಾಲಾಗೆ ಧೋಖಾ. ಸೈಕಲ್ ರಿಕ್ಷಾ ಓಡಿಸಿದವನಿಗೆ 3 ಕೋಟಿ ಟ್ಯಾಕ್ಸ್ ಕಟ್ಟುವಂತೆ ಬಂದಿದೆ ಐಟಿಯಿಂದ ನೋಟಿಸ್. ಇದು ಕೇಳಲು ಅಸಾಧ್ಯವೆನಿಸಿದರೂ ಸತ್ಯ. ಈಗ ಇದೇ ಎಲ್ಲಡೆ ಹರಿದಾಡುತ್ತಿರೋ ಇಂಟ್ರಸ್ಟಿಂಗ್ ನ್ಯೂಸ್.

ಇಲ್ಲಿಯ ಬಾಕಾಳ್ ಪುರದ ಅಮರ್ ಕಾಲೋನಿಯ ನಿವಾಸಿ ಈ ಸೈಕಲ್ ರಿಕ್ಷಾ ವಾಲಾ. ಹೆಸರು ಪ್ರತಾಪ್ ಸಿಂಗ್. ತನಗೆ ಬಂದಿರೋ ಐಟಿ ನೋಟೀಸ್ ನೋಡಿ ದಂಗಾಗಿದ್ದಾರೆ. 3 ಕೋಟಿ ಟ್ಯಾಕ್ಸ್ ಕಟ್ಟೊವಷ್ಟು ವ್ಯವಹಾರವೇ ನನ್ನದಲ್ಲ. ಅದೇಗೆ ಸಾಧ್ಯ. ನನಗೆ ಗೊತ್ತಿಲ್ಲ ಅಂತಲೇ ಇಲ್ಲಿಯ ಹೆದ್ದಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಗಿದ್ದೇನು:

ಐಟಿ ರಿಟರ್ಸ್ಸ್ ಗಾಗಿಯೇ ಬ್ಯಾಂಕಿನವರು ಪ್ಯಾನ್ ಕಾರ್ಡ್ ಕೇಳಿದ್ದಾರೆ. ತನ್ನ ಬಳಿ ಇಲ್ಲದ ಕಾರಣ ಪ್ರತಾಪ್ ಸಿಂಗ್, ತೇಜ್ ಪ್ರಕಾಶ್ ಉಪಾಧ್ಯಾಯ ಅವರ ಮಾಲೀಕತ್ವದ ಜನ್ ಸುವಿಧಾ ಕೇಂದ್ರಕ್ಕೆ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅದ್ಯಾರೋ ಪ್ಯಾನ್ ಕಾರ್ಡ್ ನಕಲು ಪ್ರತಿಯನ್ನೂ ಕೊಟ್ಟಿದ್ದಾರೆ. ಅಷ್ಟೇ ಅನಕ್ಷರಸ್ಥ ಪ್ರತಾಪ್ ಸಿಂಗ್ ಆ ನಕಲಿ ಪ್ರತಿಯನ್ನ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಮುಂದಿನದು 3 ಕೋಟಿ ಟ್ಯಾಕ್ಸ್ ಕಟ್ಟಿ ಅಂತ ನೋಟೀಸ್ ಬಂದಾಗಲೇ ಎಲ್ಲವೂ ಈ ಸೈಕಲ್ ರಿಕ್ಷಾವಾಲಾಗೆ ತಿಳಿದಿದೆ. ಐಟಿ ಅಧಿಕಾರಿಗಳೇ ನಿಮಗೆ ಮೋಸ ಆಗಿದೆ ಕಂಪ್ಲೆಂಟ್ ಕೊಡಿ ಅಂತ ಹೇಳಿದ್ದಾರೆ. ಪೊಲೀಸರು ಈ ರಿಕ್ಷಾವಾಲಾನ ದೂರಿನ ಆಧಾರದ ಮೇಲೆ ಇನ್ನೂ ಯಾವುದೇ ಕೇಸ ದಾಖಲಿಸಿಲ್ಲ.ಆದರೆ ಏನ್ ಆಗಿದೆ ಅಂತ ಪರಿಶೀಲಿಸುತ್ತವೇ ಎಂದು ಹೇಳಿದ್ದಾರೆ.

Edited By :
PublicNext

PublicNext

25/10/2021 12:58 pm

Cinque Terre

25.79 K

Cinque Terre

3

ಸಂಬಂಧಿತ ಸುದ್ದಿ