ಒಡಿಶಾ: ಚಿಕ್ಕ ವಯಸ್ಸಿಗೆ ಮದುವೆ ಮಾಡಿದರೆ ಏನೆಲ್ಲ ದುರಂತ ಆಗುತ್ತದೆ ಅನ್ನೋಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಆಗಿದೆ. 26 ವರ್ಷದ ಯುವತಿಯನ್ನ ಮದುವೆ ಆದ 17 ವರ್ಷದ ಅಪ್ರಾಪ್ತ ಹುಡುಗ ಮೊಬೈಲ್ ಖರೀದಿಗಾಗಿಯೇ ಹೆಂಡತಿಯನ್ನ 55 ವರ್ಷದ ವೃದ್ಧನಿಗೆ ಮಾರಾಟ ಮಾಡಿ ಬಿಟ್ಟಿದ್ದಾನೆ.
ಇದು ವಿಚಿತ್ರ ಅನಿಸಿದರೂ ಸತ್ಯ.55 ವರ್ಷದ ವೃದ್ಧನಿಗೆ ತನ್ನ ಪತ್ನಿಯನ್ನ 1.8 ಲಕ್ಷಕ್ಕೆ ಮಾರಾಟ ಮಾಡಿದ್ದಾನಂತೆ. ಪತ್ನಿಗೆ ತಿಳಿಯದೇನೇ ಬಲವಂತದಿಂದಲೇ ಬರನ್ ಜಿಲ್ಲೆಗೆ ಕರೆತಂದು ಬಿಟ್ಟಿದ್ದಾನೆ. ಹೊಸದೊಂದು ಮೊಬೈಲ್ ಅನ್ನೂ ಖರೀದಿಸಿದ್ದಾನೆ. ಹೀಗೆ ಪತ್ನಿಯನ್ನ ಮಾರಾಟ ಮಾಡಿ ಮಜಾಮಾಡ್ತಿದ್ದ ಅಪ್ರಾಪ್ತ ಭೂಪನನ್ನ ಈಗ ಪೊಲೀಸರು ಬಂಧಿಸಿದ್ದಾರೆ.ಈ ಅಪ್ರಾಪ್ತ ವಯಸ್ಸಿನ ಹುಡುಗನಿಗೆ ಎಲ್ಲ ಚಟಗಳು ಇದ್ದು ಕುಡಿದು ಬಂದು ಪತ್ನಿಯನ್ನ ಆಗಾಗ ಹೊರಡೆಯುತ್ತಿದ್ದ ಅಂತಲೂ ಹೇಳಲಾಗಿದೆ.
PublicNext
23/10/2021 12:44 pm