ಮಹೇಶ್ವರಂ: ಇತ್ತೀಚೆಗೆ ಯುವಕರ ಮನಸ್ಸು ತೀರಾ ದುರ್ಬಲವಾಗುತ್ತಿದೆ. ಯಾವುದೇ ವಿಷಯವನ್ನು ಸಮಾಧಾನದಿಂದ ತೆಗೆದುಕೊಳ್ಳದೇ ಆತುರದ ನಿರ್ಧಾರಗಳಿಂದ ಬದುಕನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಸದ್ಯ ಇಲ್ಲೊಬ್ಬ ಯುವತಿ ನಿಶ್ಚಿತಾರ್ಥ ರದ್ದಾಗುತ್ತಿದ್ದಂತೆ ಮನನೊಂದು ಕುಣಿಕೆಗೆ ಕೊರಳೊಡ್ಡಿರುವ ಘಟನೆ ತೆಲಂಗಾಣದ ಮಹೇಶ್ವರಂ ಮಂಡಲದ ಪೆಂಡ್ಯಾಲಾ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಪ್ರಗತಿ ಎಂದು ಗುರುತಿಸಲಾಗಿದ್ದು ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದಳು. ಅಮೀರ್ ಪೇಟೆ ಗ್ರಾಮದ ಕಾರ್ತಿಕ್ ಎಂಬುವನ ಜತೆಯಲ್ಲಿ ನಿಶ್ಚಿತಾರ್ಥ ನಿಶ್ಚಯವಾಗಿತ್ತು ಆದರೆ, ಕಾರ್ತಿಕ್ ನಿಶ್ಚಿತಾರ್ಥ ರದ್ದು ಮಾಡಿದ್ದ. ಇದರಿಂದ ನೊಂದ ಪ್ರಗತಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿನ ಹಾದಿ ಹಿಡಿದಿದ್ದಾಳೆ.
ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
22/10/2021 05:50 pm