ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ತೋಳ ಕೊಂದು ಬೈಕ್​ಗೆ ಕಟ್ಟಿ ಎಳೆದೊಯ್ದ ಯುವಕರು

ಗದಗ: ಗ್ರಾಮಕ್ಕೆ ನುಗ್ಗಿ ಕೆಲವರ ಮೇಲೆ ದಾಳಿ ಮಾಡಿದ್ದ ತೋಳವನ್ನು ಸಾಯಿಸಿ ಬೈಕ್‌ಗೆ ಕಟ್ಟಿ ಎಳೆದೊಯ್ದ ವಿಕೃತ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೋಗಿವಾಳ ಗ್ರಾಮದಲ್ಲಿ ನಡೆದಿದೆ.

ಸೋಗಿವಾಳ ಗ್ರಾಮದ ಯುವಕ ಶಿವಾನಂದ ಅತ್ತಿಗೇರಿ ಹಾಗೂ ಇತರರ ಮೇಲೆ ತೋಳ ದಾಳಿ ಮಾಡಿತ್ತು. ಹೀಗಾಗಿ ತೋಳದ ಮೇಲೆ ಆಕ್ರೋಶಿತರಾದ ಗ್ರಾಮಸ್ಥರು ತೋಳವನ್ನು ಅಟ್ಟಾಡಿಸಿ ಹೊಡೆದು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಅದರ ಕಳೇಬರವನ್ನು ಬೈಕ್‌ಗೆ ಕಟ್ಟಿ ಎಳೆದುಕೊಂಡು ಹೋಗಿದ್ದಾರೆ. ತೋಳಕ್ಕೆ ಹುಚ್ಚು ಹಿಡಿದಿತ್ತು ಎನ್ನುವ ಮಾಹಿತಿ ಇದೆ. ಇನ್ನು ತೋಳವನ್ನು ಕೊಲೆಗೈದ ಯುವಕರಿಗಾಗಿ ಹಾಗೂ ತೋಳದ ಕಳೇಬರಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Edited By : Shivu K
PublicNext

PublicNext

18/10/2021 09:36 am

Cinque Terre

118.63 K

Cinque Terre

14

ಸಂಬಂಧಿತ ಸುದ್ದಿ