ಮಹಾರಾಷ್ಟ್ರ : ಗಂಡ-ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂಬ ಮಾತೊಂದಿದೆ ಆದರೆ ಇಲ್ಲಿ ಗಂಡ ಹೆಂಡತಿ ಮಧ್ಯೆ ಆರಂಭವಾದ ಜಗಳ ಎಲ್ಲಿಗೆ ಹೋಗಿ ಮುಟ್ಟಿದೆ ಗೊತ್ತೆ. ಈ ವಿಚಾರ ಗೊತ್ತಾದ್ರೆ ನೀವು ಶಾಕ್ ಆಗೊದು ಗ್ಯಾರಂಟಿ .ಮಹಾರಾಷ್ಟ್ರದ ಬಾಂದ್ರಾದ ಮಸಲ್ ನಲ್ಲಿ ಗಂಡ ತನ್ನ ಮೊಬೈಲ್ ಅನ್ನು ವಾಪಸ್ ಕೊಡಲಿಲ್ಲ ಎಂಬ ಕೋಪಕ್ಕೆ ಹೆಂಡತಿ ಆತನ ತುಟಿಯನ್ನೇ ಕತ್ತರಿಸಿದ್ದಾಳೆ. ಅಚ್ಚರಿಯಾದರೂ ಇದು ಸತ್ಯ.
ಮಸಲ್ ನಲ್ಲಿ 40 ವರ್ಷದ ಖೇಮ್ ರಾಜ್ ಬಾಬೂರಾವ್ ಮುಲ್ ಎಂಬ ವ್ಯಕ್ತಿ ಬಾಂದ್ರಾದಲ್ಲಿ ವಾಸವಾಗಿದ್ದರು. ತನ್ನ ಮೊಬೈಲ್ ಹಾಳಾಗಿದ್ದರಿಂದ ಮನೆಯಲ್ಲಿದ್ದಾಗ ಅವರು ಹೆಂಡತಿಯ ಮೊಬೈಲ್ ಅನ್ನು ಬಳಸುತ್ತಿದ್ದರು. ತನ್ನ ಮೊಬೈಲನ್ನು ಯಾವಾಗಲೂ ಗಂಡನೇ ಹಿಡಿದುಕೊಂಡಿರುತ್ತಾನೆ ಎಂದು ಕೋಪಗೊಂಡ ಹೆಂಡತಿ ಗಂಡನ ತುಟಿಯನ್ನು ಚಾಕುವಿನಿಂದ ಕತ್ತರಿಸಿದ್ದಾಳೆ.
ಚಾಕುವನ್ನು ಗಂಡನ ಮುಖದ ಮೇಲೆ ಎಸೆದಾಗ ಆ ಚಾಕು ಆತನ ತುಟಿಗೆ ತಾಗಿ ತುಟಿ ಕತ್ತರಿಸಿಹೋಗಿದೆ. ಬಳಿಕ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ಮೇಲೆ ಹಲ್ಲೆ ಮಾಡಿದ ಹೆಂಡತಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.
PublicNext
16/10/2021 09:58 pm