ರಾಯಚೂರು: ಬೈಕ್ ಸ್ಕಿಡ್ ಆಗಿ ಇಬ್ಬರು ಬೈಕ್ ಸವಾರರು ಸಾವನ್ನಪಿದ ದುರ್ಘಟನೆ ರಾಯಚೂರು ಜಿಲ್ಲೆಯ ನಲ್ಲಬಂಡಾ ಕ್ರಾಸ್ ಬಳಿ ನಡೆದಿದೆ.
ದೀಪಕ್ ( 22) , ಹುಸೇನ್ ( 23) ಎಂಬುವರು ಮೃತ ದುರ್ದೈವಿಗಳು. ಮೃತರು ನಗರದ ತಿಮ್ಮಪೂರ ಪೇಟೆ ನಿವಾಸಿಗಳಾಗಿದ್ದು ಅಣ್ಣನನ್ನು ಕರೆದುಕೊಂಡು ಬರಲು ಹೋದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
PublicNext
15/10/2021 04:20 pm