ದಾವಣಗೆರೆ: ಯಾರ ಸಾವು ಹೇಗೆ, ಯಾವಾಗ ಬರುತ್ತೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ. ಈ ಮಾತಿಗೆ ಉದಾಹರಣೆ ಎಂಬಂತೆ ದಾವಣಗೆರೆ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ.
ಮೂತ್ರ ಮಾಡಲು ಹೋದ ಯುವಕ ಹೆಣವಾಗಿದ್ದಾನೆ. ದಾವಣಗೆರೆ ಜಿಲ್ಲೆ ಯಲ್ಲಮ್ಮ ನಗರದ ಕುಂದವಾಡ ರಸ್ತೆಯ ಬಳಿ ಈ ದುರ್ಘಟನೆ ನಡೆದಿದೆ. ಭರತ್ ಕಾಲೊನಿ ನಿವಾಸಿ ಮನೋಜ್ ಮಜ್ಜಿಗೆ (23) ಎಂಬ ಯುವಕನೇ ದುರಂತ ಸಾವು ಕಂಡ ದುರ್ದೈವಿ.
ನಿನ್ನೆ ಸೋಮವಾರ ರಾತ್ರಿ ಸುರಿವ ತುಂತುರು ಮಳೆ ನಡುವೆ ಮನೋಜ್ ಮೂತ್ರ ವಿಸರ್ಜಿಸಲು ಹೊರಹೋಗಿದ್ದ. ಈ ವೇಳೆ ವಿದ್ಯುತ್ ತಂತಿ ಗ್ರೌಂಡ್ ಆಗಿ ಮನೋಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೃತನ ಶವವನ್ನು ಶವಾಗಾರಕ್ಕೆ ಕಳುಹಿಸಿದ್ದಾರೆ.
PublicNext
12/10/2021 12:18 pm