ಜ್ಜೈಪುರ್: ರಾಜಸ್ಥಾನದ ಹನುಮಾನ್‌ಘರ್ ಜಿಲ್ಲೆಯ ಪ್ರೇಂಪುರ ಎಂಬಲ್ಲಿ ದಲಿತ ಯುವಕನೊಬ್ಬನ ಮೇಲೆ ಗುಂಪೊಂದು ತೀವ್ರ ಹಲ್ಲೆ ನಡೆಸಿ, ಹತ್ಯೆ ಮಾಡಿದೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗದೀಶ್ ಮೇಘವಾಲ್ ಕೊಲೆಯಾದ ಯುವಕ. ಜಗದೀಶ್ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಗುಂಪೊಂದು ಆತನನ್ನು ಮನಬಂದಂತೆ ಥಳಸಿ ಕೊಲೆಗೈದಿದೆ. ಈ ಘಟನೆ ಸಂಬಂಧ ಸಂತ್ರಸ್ತ ಯುವಕನ ಕುಟುಂಬ ಮತ್ತು ದಲಿತ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದೆ. ಕೃತ್ಯದ ವಿಚಾರವಾಗಿ ರಾಜಸ್ಥಾನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಬಿಎಸ್‌ಬಿ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕನನ್ನು ಹೊಲಕ್ಕೆ ಎಳೆದೊಯ್ದು ಕೈಕಟ್ಟಿ ಮೊಣಕಾಲಿನಲ್ಲಿ ಕೂರಿಸಿ ದೊಣ್ಣೆಗಳಿಂದ ಮನಬಂದಂತೆ ಥಳಿಸಲಾಗಿದೆ. ಆತನ ಕೊನೆಯ ಉಸಿರಿರುವರೆಗೂ ಹಲ್ಲೆ ನಡೆಸಲಾಗಿದೆ. ನಂತರ ಶವವನ್ನು ಆತನ ಮನೆ ಮುಂದೆ ಎಸೆಯಲಾಗಿದೆ. ಕೃತ್ಯದ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
11/10/2021 09:37 pm