ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಬುದ್ಧಿವಂತರ ಜಿಲ್ಲೆಯಲ್ಲೇ ಆತ್ಮಹತ್ಯೆ ಹೆಚ್ಚು!

-ಪಬ್ಲಿಕ್ ನೆಕ್ಸ್ಟ್ ವಿಶೇಷ

ವರದಿ: ರಹೀಂ ಉಜಿರೆ

ಉಡುಪಿ: ಕೊರೋನಾ ಮತ್ತು ಲಾಕ್ ಡೌನ್ ಜನರ ಬದುಕನ್ನೇ ಆಹುತಿ ತೆಗೆದುಕೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ಬಂದು ನಿಧಾನವಾಗಿ ಜನಜೀವನದಲ್ಲಿ ಚೇತರಿಕೆಯೇನೋ ಕಂಡು ಬರುತ್ತಿದೆ.ಆದರೆ ಸಂಕಷ್ಟಕ್ಕೀಡಾದ ಜನ ಆತ್ಮಹತ್ಯೆ ಮೊರೆ ಹೋಗುತ್ತಿರುವುದು ಕಳವಳಕಾರಿ.ಇನ್ನೂ ಆತಂಕದ ಸಂಗತಿ ಎಂದರೆ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ಉಡುಪಿಯಲ್ಲೇ ಸುಶಿಕ್ಷಿತರು ಬದುಕಿನ ಸವಾಲು ಎದುರಿಸಲಾಗದೇ ಸೂಸೈಡ್ ಮೊರೆ ಹೋಗುತ್ತಿರುವುದು!

ನೀವು ನಂಬಲಿಕ್ಕಿಲ್ಲ.ಕೃಷ್ಣನಗರಿಯ ಆತ್ಮಹತ್ಯೆ ರಿಪೋರ್ಟ್ ತೆಗೆದು ನೋಡಿದರೆ ಇಲ್ಲಿ ಸುಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ಯಿದ್ದಾರೆ.ಕಳೆದ ಒಂದೂವರೆ ವರ್ಷಗಳಲ್ಲಿ ಶಿಕ್ಷಕರು ,ಆರೋಗ್ಯ ಕಾರ್ಯಕರ್ತರು ,ಉಪನ್ಯಾಸಕರು ಅತ್ಮಹತ್ಯೆ ಮೊರೆ ಹೋಗುವುದು ಒಂದು ಕಡೆಯಾದರೆ ,ಹೊಟೇಲ್ ಉದ್ಯಮಿಗಳು ,ಆರ್ಥಿಕ‌ ಸಂಕಷ್ಟಕ್ಕೀಡಾದವರು ,ವ್ಯಾಪಾರದಲ್ಲಿ ಸೋಲುಂಡವರು,ಕೌಟುಂಬಿಕ ಸಮಸ್ಯೆಗೀಡಾದವರು ಹೆಚ್ಚಿನ ಸಂಖ್ಯೆಯಲ್ಲಿ ಸೂಸೈಡ್ ಗೆ ಶರಣಾಗುತ್ತಿದ್ದಾರೆ.ಇನ್ನು ,ಒಂಟಿತನ ಎಂಬುದು

ಬಹುತೇಕ ಮಂದಿಯ ಮಾನಸಿಕ ನೆಮ್ಮದಿಗೆ ಹೊಡೆತ ನೀಡಿದೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ

ಶರಣಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಈ ಕುರಿತು ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಈ ರೀತಿ ಹೇಳುತ್ತಾರೆ....

ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ವರದಿ ಬೊಟ್ಟು‌ ಮಾಡುತ್ತದೆ. 2021ರಲ್ಲಿ 312, 2020 ರಲ್ಲಿ 370 ಹಾಗೂ 2019ರಲ್ಲಿ 368 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ರಿಪೋರ್ಟ್ ಗಳು ಹೇಳುತ್ತವೆ! ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲೇ 28 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನು 2019 ಮತ್ತು 2020ರಲ್ಲಿ

ಸರಾಸರಿ ಪ್ರತಿದಿನ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ 2021ರ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳು ಸರಸಾರಿ 34 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಳೆದ ತಿಂಗಳು ಜಿಲ್ಲೆಯ ಕಾರ್ಕಳದಲ್ಲಿ ಮೂವರು ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಇದನ್ನು ತಡೆಯುವುದು ಹೇಗೆ? ಆತ್ಮಹತ್ಯೆ ತಡೆಯುವಲ್ಲಿ ಮಾಧ್ಯಮದ ಪಾತ್ರ ಏನು? ಎಂಬ ಕುರಿತು ಮಾತನಾಡಿದ್ದಾರೆ.

ಇನ್ನು ಮನೆಯಲ್ಲಿ ಯಾರೂ ಇಲ್ಲದೆ ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರು, ಲಾಕ್‌ಡೌನ್, ಕೊರೋನಾ ಭಯದಿಂದ ಹೊರಗಡೆ ಹೋಗಲಾರದೆ, ಬೇರೆ ಯವರೊಂದಿಗೆ ನೋವು ಹಂಚಿಕೊಳ್ಳಲಾಗದೆ, ಜನರೊಂದಿಗೆ ಬೆರೆಯಲಾಗದೆ ಇನ್ನಷ್ಟು ಒಂಟಿತನಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ತುತ್ತಾ ಗುತ್ತಿದ್ದಾರೆ. ಅದೇ ರೀತಿ ಸಾಲ ಹಾಗೂ ಉದ್ಯೋಗ ಇಲ್ಲದೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಉಡುಪಿಯಲ್ಲಿ ಪ್ರತಿನಿತ್ಯ ಎಂಬಂತೆ ಆತ್ಮಹತ್ಯೆ ಮಾಡಿಕೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಆತ್ಮಹತ್ಯೆಯನ್ನು ಬದಿಗಿರಿಸಿದರೆ ಕಳೆದ ಒಂದೂವರೆ ವರ್ಷಗಳಲ್ಲಿ ಮಾನಸಿಕ ರೋಗಿಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿರುವುದು ಎಚ್ಚರಿಕೆ ಗಂಟೆಯಾಗಿದೆ.ಒಟ್ಟಾರೆ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಸರಕಾರ ಮತ್ತು ಸಮಾಜ ಒಟ್ಟಾಗಿ ಚಿಂತಿಸಬೇಕಾದ ಅಗತ್ಯವಿದೆ.

Edited By : Shivu K
PublicNext

PublicNext

11/10/2021 12:21 pm

Cinque Terre

47.94 K

Cinque Terre

1