ತ್ರಿಶೂರ್ (ಕೇರಳ): ಪತಿಯ ಕಾಲು ತುಂಡರಿಸಿ ನಂತರ ಆತನಿಗೆ ಅನೈತಿಕ ಸಂಬಂಧ ಇತ್ತು ಎಂದು ಕತೆ ಕಟ್ಟಿದ ಎನ್ನಲಾದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಶೂರ್ ಸಮೀಪದ ಕೋರ್ಕೆಂಚೆರಿ ನಿವಾಸಿ ನಯನಾ(30) ಎಂಬಾಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈಕೆ ತನ್ನ ಪತಿ ಮೇಲೆ ಹಲ್ಲೆ ಮಾಡಲು ಸ್ಥಳೀಯ ಗ್ಯಾಂಗ್ ಒಂದಕ್ಕೆ ಸುಪಾರಿ ನೀಡಿದ್ದಳು. ಪರಿಣಾಮ ಗ್ಯಾಂಗ್ ನವರು ಬಂದು ನಯನಾಳ ಗಂಡ ಸಿ.ಪಿ ಪ್ರಮೋದ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿತ್ತು. ತಮ್ಮ ಮೇಲಾದ ಹಲ್ಲೆ ಬಗ್ಗೆ ಪ್ರಮೋದ್ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ಸಮಯದಲ್ಲಿ ಸುಳಿವು ಆಧರಿಸಿ ನಯನಾಳನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಈಕೆ ಜಾಮೀನು ಪಡೆದು ಈಗ ಹೊರಬಂದಿದ್ದಾಳೆ.
PublicNext
11/10/2021 12:11 pm