ಚಿಕ್ಕಮಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನದ ಆರೋಪ ಕೇಸ್‌ನಲ್ಲಿ ಬಂಧಿತನಾಗಿದ್ದ ಆರೋಪಿ ಠಾಣೆಯ ಲಾಕಪ್ ಚಿಲಕ ತೆಗೆದು ಪರಾರಿಯಾಗಿದ್ದಾನೆ.
ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿ ನಿಜಾಮ್ (26) ಬಂಧಿಸಲಾಗಿತ್ತು. ಸಿಬ್ಬಂದಿ ಇಲ್ಲದ ಸಮಯ ನೋಡಿ ಆರೋಪಿ ಲಾಕಪ್‌ನಿಂದ ಎಸ್ಕೇಪ್ ಆಗಿದ್ದಾನೆ. ಪೊಸ್ಕೊ ಆರೋಪಿ ಪರಾರಿಯಾಗಿರುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ.
PublicNext
11/10/2021 11:40 am