ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲೇಜ್​ಗೆ ಚಕ್ಕರ್- ಪಾರ್ಕಿನ ಪೊದೆಯಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ: ಸಾರ್ವಜನಿಕರ ಕಿಡಿ

ಚಿಕ್ಕಬಳ್ಳಾಪುರ: ಮಕ್ಕಳು ಕಾಲೇಜಿಗೆ ಹೋಗಿ ಉತ್ತಮ ಜೀವನ ರೂಪಿಸಿಕೊಳ್ಳಲಿ ಅಂತ ಪೋಷಕರು ಕಳುಹಿಸುತ್ತಾರೆ. ಆದರೆ ಅವರು ಮಾತ್ರ ತರಗತಿಗೆ ಚಕ್ಕರ್ ಹೊಡೆದು ಹುಡುಗ-ಹುಡುಗಿಯರು ಪೊದೆ ಮರೆಯಲ್ಲಿ ಅಸಭ್ಯ ವರ್ತನೆ ತೊಡಗುತ್ತಿರುವ ದೃಶ್ಯ ಚಿಕ್ಕಬಳ್ಳಾಪುರದ ಪಾರ್ಕ್​ವೊಂದರಲ್ಲಿ ಕಂಡುಬಂದಿದೆ. ಇದರಿಂದಾಗಿ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ.

ಚಿಕ್ಕಾಬಳ್ಳಾಪುರ ನಗರಸಭೆ ಸಾರ್ವಜನಿಕರ ವಿಶ್ರಾಂತಿಗಾಗಿ ಪಾರ್ಕ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇಲ್ಲಿ ಕಾಲೇಜು ವಿದ್ಯಾರ್ಥಿಗಳು ಅಸಭ್ಯ ವರ್ತನೆ, ಎಣ್ಣೆ, ಗಾಂಜಾ ಹಾಗೂ ಧೂಮಪಾನ ಮಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ, ಮುಜುಗರ ಉಂಟಾಗುತ್ತಿದೆ.

ಪಾರ್ಕ್‌ನಲ್ಲಿ ಪಾರ್ಥೇನಿಯಂ ಗಿಡವನ್ನು ಬೆಳೆದಿರುವ ಪರಿಣಾಮ ಪೊದೆಗಳು ಹೆಚ್ಚಾಗಿವೆ. ಹೀಗಾಗಿ ಇದು ಅನೈತಿಕ ಚಟುವಟಿಕೆಯ ತಾಣವಾಗಿದೆ. ಹಗಲಿನಲ್ಲಿ ಯಾವಾಗ ನೋಡಿದರೂ ಎಣ್ಣೆ, ಗಾಂಜಾ ಹಾಗೂ ಧೂಮಪಾನ ಮಾಡಿ ಬಿದ್ದಿರುತ್ತಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸುಮ್ಮನಾಗಿದ್ದೆವು. ಈಗ ನೋಡಿದರೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅವರನ್ನು ಇಲ್ಲಿ ಲೈಂಗಿಕವಾಗಿ ಶೋಷಣೆ ಮಾಡುವ ಚಟುವಟಿಕೆಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಕೂಡ ಉದ್ಯೋಗದ ಆಸೆಗೋ? ಅಥವಾ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಹದಿಹರೆಯದ ಹುಡುಗರ ಕಾಮದಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

Edited By : Vijay Kumar
PublicNext

PublicNext

03/10/2021 10:20 pm

Cinque Terre

70.27 K

Cinque Terre

8

ಸಂಬಂಧಿತ ಸುದ್ದಿ