ಚಿಕ್ಕೋಡಿ- ಚಲಿಸುತ್ತಿದ್ದ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ, ಬೆಳಗಾವಿಯ ಆಲೂರು ಕೆ.ಎಂ ಗ್ರಾಮದಲ್ಲಿ ಘಟನೆ ನಡೆದಿದೆ.
ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಗನೂರು ಗ್ರಾಮದ ಪ್ರವೀಣ ಕಾಂಬ್ಳೆ (28) ಎಂಬಾತ, ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ವಂದನಾ ಹಟ್ಟಿಕರ (30) ಎಂಬ ಮಹಿಳೆ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದವ.
ಚಿಕ್ಕೋಡಿ ಉಪವಿಭಾಗದ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಿಂದ ಬಾಡ್ ಗ್ರಾಮಕ್ಕೆ ಬಸ್ ಹೋಗುತ್ತಿತ್ತು. ಈ ವೇಳೆ ಆಲೂರು ಕೆ.ಎಂ ಗ್ರಾಮದ ಸಮೀಪ ಬಸ್ ಗೆ ನುಗ್ಗಿದ ಆರೋಪಿ ಮಹಿಳೆಯ ಹಲ್ಲೆ ನಡೆಸಿದ್ದಲ್ಲದೇ ಜಗಳ ಬಿಡಿಸಲು ಮುಂದಾದ ಪ್ರಯಾಣಿಕರಿಗೆ ಮಹಿಳೆಯ ಸಮೀಪ ಬರದಂತೆ ಬೆದರಿಕೆ ಹಾಕಿದ್ದಾನೆ. ಇತ್ತ ಸ್ಥಳೀಯರ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ಧಾವಿಸಿದ ಸಂಕೇಶ್ವರ್ ಪೊಲೀಸರು ಆರೋಪಿ ಪ್ರವೀಣ ಕಾಂಬ್ಳೆಯನ್ನು ವಶಕ್ಕೆ ಪಡೆದುಕೊಂಡರು. ಈ ಕುರಿತು
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/10/2021 06:49 pm