ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪ್ರೊಟೆಸ್ಟ್ ವೇಳೆ ಕಳ್ಳರ ಕೈಚಳಕ...!

ದಾವಣಗೆರೆ: ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡನ ಜೇಬಿನಿಂದ 50 ಸಾವಿರ ರೂ. ಕಳ್ಳತನ ಮಾಡಿದ ಘಟನೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ.

ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕಳ್ಳರು ಕೈ ಚಳಕ ತೋರಿದ್ದು, ಕಾಂಗ್ರೆಸ್ ಮುಖಂಡನ ಜೇಬಿನಿಂದ 50 ಸಾವಿರ ರೂ. ಹಣವನ್ನ ಎಗರಿಸಿದ್ದಾರೆ.

ಪ್ರತಿಭಟನಾ ಮೆರವಣಿಗೆ ವೇಳೆ ರಾಯಣ್ಣ ವೃತ್ತದಲ್ಲಿ ಗದ್ದಲ ಉಂಟಾಗಿತ್ತು. ಈ ವೇಳೆ ಕೈ ಮುಖಂಡರ ಜೇಬಿಗೆ ಕೈ ಹಾಕಿ ಕಳ್ಳರು ಹಣವನ್ನ ಕದ್ದಿದ್ದಾರೆ.

ಮತ್ತೊಬ್ಬ ಕೈ ಮುಖಂಡನ ಜೇಬಿಗೆ ಕೈ ಹಾಕಿದ ವೇಳೆ ಸಿಕ್ಕಿ ಬಿದ್ದಿದ್ದು, ಆ ಯುವಕನಿಗೆ ಥಳಿಸಿ ಪ್ರತಿಭಟನಾಕಾರರು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagesh Gaonkar
PublicNext

PublicNext

29/09/2021 07:08 pm

Cinque Terre

236.83 K

Cinque Terre

10

ಸಂಬಂಧಿತ ಸುದ್ದಿ