ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಬೆಸ್ಕಾಂ ಸಿಬ್ಬಂದಿಯನ್ನ ಅಟ್ಟಾಡಿಸಿ ಕಲ್ಲು, ದೊಣ್ಣೆಗಳಿಂದ ಥಳಿಸಿದ ಗ್ರಾಮಸ್ಥರು

ತುಮಕೂರು: ಶಿರಾ ತಾಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯ ಗ್ರಾಮಸ್ಥರು ಬೆಸ್ಕಾಂ ಸಿಬ್ಬಂದಿಯನ್ನ ಅಟ್ಟಾಡಿಸಿ ಕಲ್ಲು, ದೊಣ್ಣೆಗಳಿಂದ ಥಳಿಸಿದ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬೆಸ್ಕಾಂ ಸಿಬ್ಬಂದಿಯು ವಿದ್ಯುತ್ ಬಿಲ್ ವಸೂಲಿಗಾಗಿ ಗೊಲ್ಲರಹಟ್ಟಿಯ ಗ್ರಾಮಕ್ಕೆ ಬಂದಿದ್ದರು. ಆದರೆ ಬಿಲ್ ಪಾವತಿಸಲು ನಿರಾಕರಿಸಿದ ಗ್ರಾಮಸ್ಥರು ಬೆಸ್ಕಾಂ ಸಿಬ್ಬಂದಿಯ ಜೊತೆಗೆ ವಾಗ್ದಾಳಿ ನಡೆದಿದೆ. ಬಳಿಕ ಗ್ರಾಮಸ್ಥರು ತೆಂಗಿನ ಎಡಮಟ್ಟೆ, ಕಲ್ಲು, ದೊಣ್ಣೆಗಳನ್ನು ಹಿಡಿದು ಬೆಸ್ಕಾಂ ಸಿಬ್ಬಂದಿ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಘಟನೆಯಲ್ಲಿ ಬೆಸ್ಕಾಂನ ಶಿರಾ ಶಾಖಾಧಿಕಾರಿ ರಾಜಣ್ಣಗೆ ಗಂಭೀರ ಗಾಯವಾಗಿದ್ದು, ಲೈನ್ಮ್ಯಾನ್ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

29/09/2021 06:48 pm

Cinque Terre

162.18 K

Cinque Terre

6

ಸಂಬಂಧಿತ ಸುದ್ದಿ