ಹೈದರಾಬಾದ್: ವ್ಯಕ್ತಿಯೋರ್ವ ಮದುವೆಯಾದ 28 ದಿನಗಳಲ್ಲೇ ಬಾಳ ಸಂಗಾತಿಯ ಕತ್ತು ಕೊಯ್ದು ಕೊಲೆಗೈದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.
ತೆಲಂಗಾಣದ ಚಾಚುಪಲ್ಲಿಯ ಪ್ರಗತಿ ನಗರದ ನಿವಾಸಿ ಕಿರಣ್ ಕುಮಾರ್, ಪ್ರೇಮಾ ಎಂಬ ಯುವತಿ ಜತೆ ಮದುವೆಯಾಗಿದ್ದ. ಆದರೆ ಆರೋಪಿಯು ತನ್ನ ಪತ್ನಿಯನ್ನು ಅನುಮಾನಿಸಲು ಆರಂಭಿಸಿದ್ದ. ಪರಿಣಾಮ ಶನಿವಾರ (ಸೆ.25)ರಂದು ರಾತ್ರಿ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದ. ಬಳಿಕ ತನ್ನ ಕೈಯನ್ನು ಚಾಕುನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಆರೋಪಿ ಕಿರಣ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೆಲವು ಸಂಗತಿ ಬೆಳಕಿಗೆ ಬಂದಿವೆ. ಆತ ಪತ್ನಿಯನ್ನು ಕೊಲೆ ಮಾಡುವುದಕ್ಕಾಗಿ ಮೊದಲೇ ಯೋಜನೆ ಮಾಡಿದ್ದ. ಅದರಂತೆ ಆನ್ಲೈನ್ ಮೂಲಕ ವಿಶೇಷ ಚಾಕು ಖರೀದಿ ಮಾಡಿದ್ದ. ಅದನ್ನು ಪಡೆದುಕೊಂಡ ದಿನವೇ ಹೆಂಡತಿ ಕೊಲೆ ಮಾಡಿದ್ದಾನೆ.
ಮೊದಲು ಗಂಟಲು ಹಿಸುಕಿ ಕೊಲೆ ಮಾಡಿರುವ ಆತ, ತದ ನಂತರ ಗಂಟಲು ಕೊಯ್ದಿದ್ದಾನೆ. ಇದಾದ ಬಳಿಕ ಮೃತ ಹೆಂಡತಿ ಸಂಬಂಧಿಕರು ತನಗೆ ತೊಂದರೆ ನೀಡಬಹುದು ಎಂಬ ಉದ್ದೇಶದಿಂದ ಅದೇ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
PublicNext
28/09/2021 08:00 pm