ಭೋಪಾಲ್ : ಮಹಿಳಾ ಅಧಿಕಾರಿಯ ಕಾರು ಚಾಲಕ ಆಕೆಯ ಮನೆಯ ಬಾತ್ ರೂಮ್ ನ ಕ್ಯಾಮೆರಾ ಇಟ್ಟು ಬೆತ್ತಲೇ ವಿಡಿಯೋ ಚಿತ್ರೀಕರಿಸಿರುವ ಆರೋಪ ಕೇಳಿಬಂದಿದೆ. ಇನ್ನು ಈ ವಿಡಿಯೋ ಡಿಲೀಟ್ ಮಾಡಲು 5 ಲಕ್ಷ ರೂ. ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದು, ಆಘಾತಕ್ಕೊಳಗಾದ ಸಂತ್ರಸ್ತೆ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.
ಕಾಮುಕ ಕಾನ್ಸ್ ಟೇಬಲ್ ಬಾತ್ ರೂಮ್ ಬಾಗಿಲ ಕಿಂಡಿಯಲ್ಲಿ ಫೋನ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದು ಗೊತ್ತಾದ ಕೂಡಲೇ ಸಂತ್ರಸ್ತೆ ತಕ್ಷಣ ಬಾಗಿಲು ತೆರೆದಾಗ ಆರೋಪಿ ಪರಾರಿ ಆಗಿದ್ದಾನೆ.
ಬಳಿಕ 5 ಲಕ್ಷ ಹಣ ಬೇಡಿಕೆಇಟ್ಟಿದ್ದಾನೆ. ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯ ಭೋಪಾಲ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
PublicNext
28/09/2021 05:03 pm