ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಳ್ಳ ವೆಂಕಟೇಶ್ ಮರ್ಡರ್ ಕೇಸ್: ಬೆಚ್ಚಿಬೀಳಿಸುತ್ತೆ ಸಿಸಿಟಿವಿ ದೃಶ್ಯ

ಬೆಂಗಳೂರು: ನಗರದಲ್ಲಿ ನಡೆದಿದ್ದ ಕುಳ್ಳ ವೆಂಕಟೇಶ್ ಕೊಲೆ ಪ್ರಕರಣದ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇನ್ನು ಘಟನೆ ಸಂಬಂಧಿಸಿದಂತೆ ಆವಲಹಳ್ಳಿ ಪೊಲೀಸರಿಂದ ಹಂತಕರು ಅರೆಸ್ಟ್ ಮಾಡಲಾಗಿದ್ದು, ಪ್ರಮುಖ ಆರೋಪಿ ಅನಿಲ್ ಸೇರಿ 6 ಜನರನ್ನು ಬಂಧಿಸಲಾಗಿದೆ. ಅದಲ್ಲದೇ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಇನ್ನು 2 ವರ್ಷಗಳ ಹಿಂದಿನ ಸೈಟ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದ್ದು, ಕಳೆದ 2 ವರ್ಷಗಳಿಂದ ಅನಿಲ್ ಹತ್ಯೆಗೆ ಹೊಂಚು ಹಾಕಿ ಕುಳಿತಿದ್ದ ಎಂದು ಹೇಳಲಾಗಿದೆ. ಹಾಗೆ ಮಾರ್ಗೊಂಡನಹಳ್ಳಿ ಸೈಟ್ನಲ್ಲಿ ಕುಳ್ಳ ವೆಂಕಟೇಶ್ ಪೊಸಿಷನ್ ಹೊಂದಿದ್ದ, ಆದರೆ ಆರೋಪಿ ಅನಿಲ್ ಮಾಲೀಕನ ಜೊತೆಗೆ ಅಗ್ರಿಮೆಂಟ್ ಮಾಡ್ಕೊಂಡಿದ್ದು, ಸೈಟ್ ಗೆ ಸಂಬಂಧಿಸಿದಂತೆ 20 ಲಕ್ಷ ಖರ್ಚು ಮಾಡಿದ್ದ ಎನ್ನಲಾಗಿದೆ. ಇನ್ನು ಹಣನೂ ಹೋಯ್ತು, ವೆಂಕಟೇಶ್ ಜಾಗ ಬಿಟ್ಟು ಕೊಡ್ತಿಲ್ಲ ಎಂದು ಮೊದಲೆ ಅನಿಲ್ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

28/09/2021 02:44 pm

Cinque Terre

88.24 K

Cinque Terre

0

ಸಂಬಂಧಿತ ಸುದ್ದಿ