ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೆ.23ರಂದು ಎರಡು ವರ್ಷದ ಹೆಣ್ಣು ಮಗುವನ್ನು ಬಿಸಾಡಿ ಹೋದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಮಗುವಿನಹೊಟ್ಟೆಯ ಕೆಳಭಾಗ ಹಾಗೂ ಮರ್ಮಾಂಗದಲ್ಲಿ ಸುಟ್ಟ ಗುರುತುಗಳು ಪತ್ತೆಯಾಗಿದ್ದವು,ಕಬ್ಬಿನ ಗದ್ದೆಯಲ್ಲಿ ನರಳುತ್ತ ಮಲಗಿದ್ದ ಬಾಲಕಿಯನ್ನು ನೋಡಿದ ಸ್ಥಳೀಯರು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಗುವಿನ ರಕ್ಷಣೆ ಮಾಡಲಾಗಿತ್ತು.
ಕಬ್ಬಿನ ಗದ್ದೆಯಲ್ಲಿ ಮಗುವನ್ನು ಬಿಸಾಡಿರುವುದನ್ನು ನೋಡಿದರೆ, ಕಿಡ್ನಾಪ್ ಮಾಡಿ ಅತ್ಯಾಚಾರ ಅಥವಾ ವಾಮಾಚಾರ ಎಸಗಿರುವಂತೆ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಅದೇ ಮಗುವನ್ನು ಹೋಲುವ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ.
ವಿಡಿಯೋದಲ್ಲಿ ಮಗುವಿನ ತಂದೆ ತಾಯಿ ಮನಸ್ಸು ಇಚ್ಛೆ ಬಂದಂತೆ ಥಳಿಸಿರುವ ದೃಶ್ಯಗಳು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಆ ವಿಡಿಯೋದಲ್ಲಿರುವ ಮಗು ಹಾಗೂ ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಮಗುವು ಒಂದೆನಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಹಾಗೂ ವಿಡಿಯೋ ವನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿರುವ ಬೆಳಗಾವಿ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
PublicNext
28/09/2021 02:23 pm