ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೂತಿಟ್ಟ ಶವ ಅಪಹರಿಸಿದ ದುಷ್ಕರ್ಮಿಗಳು: ಹಾಸನ ಜಿಲ್ಲೆಯಲ್ಲಿ ವಿಲಕ್ಷಣ ಘಟನೆ

ಹಾಸನ: ಆಧುನಿಕ ಜಗತ್ತಿನಲ್ಲಿ ಒಂದು ನಾಣ್ಯದಿಂದ ಆರಂಭವಾಗಿ ಎಕರೆಗಟ್ಟಲೇ ಭೂಮಿ ಕದಿಯುವವರಿದ್ದಾರೆ. ಆದ್ರೆ ಇದೆಲ್ಲದಕ್ಕೂ ಭಿನ್ನ ಎನ್ನುವಂತೆ ಹಾಸನ ಜಿಲ್ಲೆಯಲ್ಲಿ ವಿಲಕ್ಷಣ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಮೂರು ತಿಂಗಳ ಹಿಂದೆ ಹೂತಿದ್ದ ಶವವನ್ನು ಸಮಾಧಿ ಅಗೆದು ಹೊತ್ತೊಯ್ದಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಯಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಯಾದಾಪುರ ಗ್ರಾಮದ ಲಕ್ಷ್ಮಮ್ಮ ಅವರು ಕಳೆದ ಜೂನ್ ನಲ್ಲಿ ಮೃತಪಟ್ಟಿದ್ದರು. ಅವರ ಜಮೀನಿನಲ್ಲಿ ಕುಟುಂಬದವರು ಲಕ್ಷ್ಮಮ್ಮನವರ ಅಂತ್ಯಕ್ರಿಯೆ ನೆರವೇರಿಸಿದ್ದರು. ಸೆ. 21 ರ ರಾತ್ರಿ ದುಷ್ಕರ್ಮಿಗಳು ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ವಾಮಾಚಾರ ಮಾಡಲು ಶವ ತೆಗೆದುಕೊಂಡು ಹೋಗಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಲಕ್ಷ್ಮಮ್ಮ ಅವರ ಪುತ್ರ ಮೃತದೇಹ ಹುಡುಕಿಕೊಡುವಂತೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Edited By : Nagaraj Tulugeri
PublicNext

PublicNext

25/09/2021 08:43 am

Cinque Terre

71.78 K

Cinque Terre

8