ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಕಿಂಗ್: 21 ಸಾವಿರ ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ

ಗಾಂಧಿನಗರ: ಗುಜರಾತ್‌ನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ 3,000 ಕೆ.ಜಿ ಹೆರಾಯಿನ್ ಮಾದಕವಸ್ತುವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ವಶಕ್ಕೆ ಪಡೆದುಕೊಂಡಿದೆ.

ಅಫ್ಘಾನಿಸ್ತಾನದಿಂದ ಮುಂದ್ರಾ ಬಂದರಿಗೆ ಎರಡು ಕಂಟೇನರ್‌ಗಳಲ್ಲಿ 3,000 ಕೆ.ಜಿ ಹೆರಾಯಿನ್ ಆಮದು ಮಾಡಿಕೊಳ್ಳಲಾಗಿದೆ. ಇದರ ಅಧಿಕೃತ ಬೆಲೆಯನ್ನು ಡಿಆರ್‌ಐ ಅಧಿಕಾರಿಗಳು ಘೋಷಣೆ ಮಾಡಿಲ್ಲ. ಆದರೆ ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಇದರ ಮೌಲ್ಯ 21,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.

ಮುಂದ್ರಾ ಬಂದರಿನಿಂದಲೇ ಬಂದರಿನಲ್ಲಿ ಹೆರಾಯಿನ್ ಪತ್ತೆಯಾಗಿದ್ದು ಇದೇ ಮೊದಲೇನಲ್ಲ. ಇದೇ ಸೆ. 19ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಅಂದಾಜು 9,000 ಕೋಟಿ ರೂ. ಮೌಲ್ಯದ ಹೆರಾಯಿನ್ ಹೊಂದಿರುವ ಕಂಟೇನರ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ಬೆನ್ನಲ್ಲೇ ಇದೀಗ ಭಾರಿ ಮೊತ್ತದ ಮಾದಕ ವಸ್ತು ಮತ್ತೆ ಪತ್ತೆಯಾಗಿದೆ.

Edited By : Vijay Kumar
PublicNext

PublicNext

22/09/2021 03:06 pm

Cinque Terre

74.66 K

Cinque Terre

3