ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಂತ ನರೇಂದ್ರ ಗಿರಿ ಸಾವು ಪ್ರಕರಣ 14 ಪುಟಗಳ ಡೆತ್ ನೋಟ್ ಪತ್ತೆ

ಲಖನೌ : ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಮಹಾಂತ ನರೇಂದ್ರ ಗಿರಿ ಅವರದ್ದು ಎನ್ನಲಾದ 14 ಪುಟಗಳ ಡೆತ್ನೋಟ್ ಪತ್ತೆಯಾಗಿದೆ. ನರೇಂದ್ರ ಗಿರಿ ಅವರ ಪಾರ್ಥಿವ ಶರೀರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಜೊತೆಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ಚಿತ್ರವೊಂದನ್ನು ಶಿಷ್ಯ ಆನಂದ್ ಗಿರಿ ವೈರಲ್ ಮಾಡಲು ಯತ್ನಿಸುತ್ತಿದ್ದಾನೆ. ಇಷ್ಟು ವರ್ಷ ಘನತೆಯಿಂದ ಬದುಕಿದ ನಾನು ಇಂಥ ಅವಮಾನ ಸಹಿಸಿಕೊಳ್ಳಲು ಆಗುವುದಿಲ್ಲ ಎಂಬ ಸಾಲು ಪತ್ರದಲ್ಲಿದೆ.

ಐಷಾರಾಮಿ ಕಾರುಗಳ ಮೋಹ ಹೊಂದಿದ್ದ ಆನಂದ್ ಗಿರಿ ಗೋಶಾಲೆಗೆಂದು ಮಂಜೂರಾಗಿದ್ದ ಜಾಗದಲ್ಲಿ ಪೆಟ್ರೋಲ್ ಬಂಕ್ ತೆರೆಯಬೇಕು ಎಂದುಕೊಂಡಿದ್ದರು. ಇದನ್ನು ನರೇಂದ್ರ ಗಿರಿ ಒಪ್ಪಿಗೆ ನೀಡಿರಲಿಲ್ಲ. ಇದಾದ ನಂತರ ಇಬ್ಬರ ಮಧ್ಯೆ ಬಿರುಕು ಹೆಚ್ಚಾಗಿತ್ತು. ಆಸ್ತಿ ವಿವಾದವೂ ಇತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುಪಿ ಪೊಲೀಸರು ಮಹಾಂತ ಗಿರಿಯವರ ಒಬ್ಬ ಶಿಷ್ಯ ಮತ್ತು ಇಬ್ಬರು ಪೂಜಾರಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದೇಶದ ಸಾಧುಗಳ ಅತಿದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷರ ಸಾವಿಗೆ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದರು.

Edited By : Nirmala Aralikatti
PublicNext

PublicNext

21/09/2021 06:53 pm

Cinque Terre

91.06 K

Cinque Terre

3