ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಕುಟುಂಬದ 5 ಮಂದಿ ಸಾವು : ಹುಟ್ಟೂರಿನಲ್ಲಿ ನೀರವ ಮೌನ

ಬೆಂಗಳೂರು: ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದ್ದು ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಹೌದು ತಿಗಳರಪಾಳ್ಯದಲ್ಲಿ ವಾಸವಾಗಿದ್ದ 'ನಮ್ಮ ಶಾಸಕರ ವಾರ್ತೆ' ವಾರ ಪತ್ರಿಕೆ ಸಂಪಾದಕ ಹಲ್ಲೆಗೇರೆ ಶಂಕರ್ ಅವರ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.

ಶಂಕರ ಪತ್ನಿ ಭಾರತಿ (50), ಮಕ್ಕಳಾದ ಸಿಂಚನಾ (34), ಸಿಂಧುರಾಣಿ (31) ಮತ್ತು ಮಧುಸಾಗರ್ (27) ಹಾಗೂ ಸಿಂಚನಾಳ 9 ತಿಂಗಳ ಮಗು ಮೃತಪಟ್ಟಿದ್ದು, 2 ವರ್ಷದ ಪ್ರೇಕ್ಷಾ ಪವಾಡದಂತೆ ಬದುಕುಳಿದಿದ್ದಾಳೆ. ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದ ಶಂಕರ್, 25 ವರ್ಷಗಳಿಂದ ಬೆಂಗಳೂರಲ್ಲೇ ನೆಲೆಸಿದ್ದರು. ಶಂಕರ್ ಕುಟುಂಬದ ಐವರು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಹುಟ್ಟೂರು ಹಲ್ಲೆಗೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಶಂಕರ್ ಬೆಂಗಳೂರಲ್ಲಿ ನೆಲೆಸಿದ್ದರೂ ಆಗಾಗ್ಗೆ ಗ್ರಾಮಕ್ಕೆ ಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಊರಿನವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಯಲ್ಲಮ್ಮ ದೇಗುಲ ನಿರ್ಮಾಣಕ್ಕೂ ಆರ್ಥಿಕ ಸಹಾಯ ಮಾಡಿದ್ದರು.

'ಊರಿನಲ್ಲಿ ಅವರದ್ದು ತುಂಬಾ ಸಾತ್ವಿಕ ಕುಟುಂಬ. ಒಂದು ದಿನವೂ ಇನ್ನೊಬ್ಬರಿಗೆ ಕೆಡುಕು ಬಯಸಿದವರಲ್ಲ. ಊರಿಗೆ ಬಂದಾಗ ನಮ್ಮ ಜತೆ ಚೆನ್ನಾಗಿ ಮಾತನಾಡುತ್ತಿದ್ದರು. ನಮ್ಮ ಬಳಿ ಯಾವತ್ತೂ ತಮಗೆ ಸಮಸ್ಯೆ ಇತ್ತು ಎಂದು ಹೇಳಿಲ್ಲ. ನಾವು ನೋಡಿದಂತೆ ಅವರ ಕುಟುಂಬದಲ್ಲಿ ಯಾವುದೇ ಜಗಳ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಆಗಿದೆ ಎಂದು ಗೊತ್ತಿಲ್ಲ' ಎನ್ನುತ್ತಲೇ ಶಂಕರ್ ಸ್ನೇಹಿತರು ಮತ್ತು ಅಕ್ಕಪಕ್ಕದ ಮನೆಯವರು ಭಾವುಕರಾಗಿದ್ದಾರೆ.

Edited By : Nirmala Aralikatti
PublicNext

PublicNext

18/09/2021 03:40 pm

Cinque Terre

94.57 K

Cinque Terre

1