ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ತಿಗಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣ

ಹಾಸನ: ಕೋಟ್ಯಾಂತರ ಬೆಲೆ ಬಾಳುವ ಆಸ್ತಿಗಾಗಿ ಅಣ್ಣನೋರ್ವ ತನ್ನ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ಕೇವಲ 24 ಗಂಟೆಯೊಳಗಾಗಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಸೆಪ್ಟೆಂಬರ್.16 ರಂದು ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದ ಜಮೀನೊಂದರ ಬಳಿ 32 ವರ್ಷದ ಜಲೇಂದ್ರ ಕೊಲೆಯಾಗಿದ್ದರು. ಈ ವೇಳೆ ಮೃತದೇಹದ ಬಳಿ ಬಿಯರ್ ಬಾಟಲಿಗಳು ಪತ್ತೆಯಾಗಿತ್ತು. ಜಮೀನಿನ ನಿರ್ಜನ ಪ್ರದೇಶದಲ್ಲಿ ಸಹೋದರನಿಗೆ ಮದ್ಯ ಕುಡಿಸಿದ ಅಣ್ಣ ನಂತರ ನಶೆಯಲ್ಲಿ ತಮ್ಮನನ್ನು ಕೊಲೆ ಮಾಡಿದ್ದಾನೆ. ನಂತರ ತಮ್ಮನನ್ನು ಯಾರೋ ಕೊಲೆ ಮಾಡಿದ್ದಾಗಿ ಊರಿಗೆ ಬಂದು ರಂಪ ಮಾಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿ ತನಿಖೆ ಕೈಗೊಂಡಾಗ ಇದು ಅಣ್ಣನೇ ಮಾಡಿದ ಕೊಲೆ ಎಂಬುದು ತಿಳಿದು ಬಂದಿದೆ. ಆರೋಪಿ ಮಹೇಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Edited By : Nagaraj Tulugeri
PublicNext

PublicNext

18/09/2021 08:01 am

Cinque Terre

90.71 K

Cinque Terre

3

ಸಂಬಂಧಿತ ಸುದ್ದಿ