ರಾಯಪುರ: ಅರ್ಚಕನೋರ್ವ ತನ್ನ ಪತ್ನಿಯ ಶೀಲ ಶಂಕಿಸಿ ದೇವಾಲಯದ ಕೊಠಡಿಯಲ್ಲಿಯೇ ಆಕೆಗೆ ಬೆಂಕಿ ಹಚ್ಚಿ ಕೊಲೆಗೈದ ಅಮಾನವೀಯ ಘಟನೆ ಛತ್ತೀಸಗಢದ ಬಲೋಡಾ ಬಜಾರ್‌ನಲ್ಲಿ ನಡೆದಿದೆ.
ಮಂದಾಕಿನಿ ಪಾಂಡೆ (28) ಕೊಲೆಯಾದ ಮಹಿಳೆ. ಅರ್ಚಕ ರಾಮನಾರಾಯಣ ಪಾಂಡೆ (35) ತನ್ನ ಪತ್ನಿ ಮಂದಾಕಿನಿ ಅನ್ಯ ಪುರುಷನ ಜೊತೆಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದಾಳೆಂದು ಅನುಮಾನ ವ್ಯಕ್ತಪಡಿಸಿ ಈ ಕೃತ್ಯ ಎಸಗಿದ್ದಾನೆ. ದೇವಸ್ಥಾನದ ಕೋಣೆಗೆ ಬೆಂಕಿ ಹತ್ತಿರುವುದನ್ನು ನೋಡಿರುವ ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಅವರು ಆಗಮಿಸಿದ್ದಾರೆ. ಈ ಸಮಯದಲ್ಲಿ ರಾಮನಾರಾಯಣ, 'ಪತ್ನಿ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂದಾಕಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಡೆತ್ ರಿಪೋರ್ಟ್‌ನಲ್ಲಿ ಮಹಿಳೆಗೆ ಬೆಂಕಿ ಹಚ್ಚುವ ಮುನ್ನ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲು ಪ್ರಯತ್ನ ನಡೆಸಲಾಗಿದೆ ಎನ್ನುವುದು ತಿಳಿದು ಬಂದಿದೆ. ತಕ್ಷಣವೇ ರಾಮನಾರಾಯಣನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
PublicNext
16/09/2021 06:06 pm