ಲಕ್ನೋ: ಉತ್ತರ ಪ್ರದೇಶ ರಾಜಧಾನಿ ಲಕ್ನೋದ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಯುವತಿಯೊಬ್ಬಳು ಕ್ಯಾಬ್ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಳು. ಜುಲೈ 31ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಬಗ್ಗೆ ಹಲ್ಲೆ ನಡೆಸಿದ ಯುವತಿ ಪ್ರಿಯದರ್ಶಿನಿ ನಾರಾಯಣ್ ಯಾದವ್ ಹಾಗೂ ಟ್ಯಾಕ್ಸಿ ಚಾಲಕ ಸಾದತ್ ಅಲಿ ಸಿದ್ದಿಕಿ ಇಬ್ಬರೂ ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದು, ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಧ್ಯಮವೊಂದರ ಜೊತೆಗೆ ಮಾತನಾಡುವಾಗ ಸಿದ್ದಿಕಿ, ಯುವತಿ ಎಷ್ಟೇ ಹೊಡೆಯುತ್ತಿದ್ದರೂ ಯಾಕೆ ತಾನು ಹಿಂಸೆಯ ಹಾದಿಗೆ ಇಳಿಯಲಿಲ್ಲ ಎಂದು ವಿವರಿಸಿದ್ದಾರೆ.
"ನಮ್ಮ ಮನೆಯಲ್ಲಿ ತಂದೆ-ತಾಯಿ ಮಹಿಳೆಗೆ ಹೊಡೆಯುವುದರನ್ನು ನನಗೆ ಕಲಿಸಿಲ್ಲ. ನಾನು ತುಂಬಾ ಒಳ್ಳೆಯ ಕುಟುಂಬದಿಂದ ಬಂದವನು. ನನ್ನ ತಾಯಿ ಎಂದಿಗೂ ಮಹಿಳೆಯನ್ನು ಹೊಡೆಯಬಾರದೆಂದು ನನಗೆ ಕಲಿಸಿದ್ದಾರೆ. ಸ್ವರ್ಗವು ತಾಯಿಯ ಪಾದದಲ್ಲಿದೆ, ಅದು ನಿಮಗೂ ತಿಳಿದಿದೆ. ಹೀಗಾಗಿ ನಾನು ತಿರುಗಿ ಕೈ ಮಾಡಲಿಲ್ಲ" ಎಂದು ಸಾದತ್ ಅಲಿ ಸಿದ್ದಿಕಿ ಹೇಳಿದ್ದಾರೆ.
"ಕ್ಯಾಬ್ ಮಾಲೀಕರು ನನಗೆ ಕೊಟ್ಟಿದ್ದ ಮೊಬೈಲ್ ಅನ್ನು ಯುವತಿ ಒಡೆದು ಹಾಕಿದರು. ಘಟನೆಯಲ್ಲಿ ನನ್ನ ಕಾರಿಗೂ ಹಾನಿಯಾಗಿತ್ತು. ನನಗೆ ಸುಮಾರು 60,000 ರೂ. ನಷ್ಟವಾಗಿದೆ'' ಎಂದು ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
14/09/2021 10:52 pm