ತಿರುವನಂತಪುರಂ: ಟಿಕ್‌ಟಾಕ್‌ನಲ್ಲಿ ಪರಿಚಯವಾದ ಗೆಳೆಯನನ್ನು ಭೇಟಿಯಾಗಲು ಬಂದಿದ್ದ 32 ವರ್ಷದ ಮಹಿಳೆಯ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಸಂತ್ರಸ್ತ ಮಹಿಳೆ ಟಿಕ್‌ಟಾಕ್ ಮೂಲಕ ಪರಿಚಯವಾದ ಅಂಜಾಜ್(26) ಜತೆ ಸಂಪರ್ಕದಲ್ಲಿದ್ದರು. ಅಂಜಾಜ್ ಖುದ್ದಾಗಿ ಭೇಟಿಯಾಗುವಂತೆ ಮಹಿಳೆಯನ್ನು ಒತ್ತಾಯಿಸಿದ್ದ. ಅದರಂತೆ ಗುರುವಾರ ಮಹಿಳೆ ತನ್ನ ಸ್ವಂತ ಊರು ದಕ್ಷಿಣ ಕೇರಳದ ಕೊಲ್ಲಂನಿಂದ 300ಕಿ.ಮೀ. ದೂರದ ಕಾಚಿಕೋಡಾಗೆ ಪ್ರಯಾಣಿಸಿದ್ದಳು.
ಆರೋಪಿ ಅಂಜಾಜ್ ತನ್ನ ಸ್ನೇಹಿತ ಫಹಾದ್ ಒಟ್ಟಿಗೆ ಸೇರಿ ಮಹಿಳೆಯನ್ನು ನಗರದ ಹೊರವಲಯದಲ್ಲಿರುವ ಪ್ಲಾಟ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮತ್ತುಬರುವ ಔಷಧಿ ಬೆರೆಸಿದ ಪಾನೀಯ ನೀಡಿದ್ದು, ಅದನ್ನು ಕುಡಿದ ಪ್ರಜ್ಞೆ ತಪ್ಪಿದ ಮಹಿಳೆ ಮೇಲೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಇತರ ಇಬ್ಬರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ನಾಲ್ವರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ನಿತ್ರಾಣಳಾದ ಮಹಿಳೆ ಸತ್ತು ಹೋಗಿಬಿಡಬಹುದೆಂಬ ಆತಂಕದಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಅತ್ಯಾಚಾರ ಹಾಗೂ ಆಕೆಗೆ ಕಿರುಕುಳ ನೀಡಿದ ದೃಶ್ಯಗಳನ್ನು ಚಿತ್ರಿಸಿಕೊಂಡಿದ್ದು, ಪೊಲೀಸರಿಗೆ ದೂರು ನೀಡುವುದು ಹಾಗೂ ಬೇರೆಯವರಿಗೆ ಬಾಯಿಬಿಟ್ಟರೆ ತಮ್ಮ ಮೊಬೈಲ್‌ನಲ್ಲಿರುವ ನಗ್ನ ವೀಡಿಯೋ ಮತ್ತು ಚಿತ್ರಗಳನ್ನು ಇಂಟರ್‍ನೆಟ್‌ನಲ್ಲಿ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಆಕೆಯ ಗಂಭೀರ ಪರಿಸ್ಥಿತಿ ನೋಡಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದ ಆರೋಪಿ ಅಂಜಾಜ್‍ನ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಫಹಾದ್ ಮತ್ತು ಅಂಜಾಜ್‍ನನ್ನು ಶುಕ್ರವಾರ ಅಂಥೋಲಿಯಲ್ಲಿ ಬಂಧಿಸಲಾಗಿದೆ. ಬಳಿಕ ಇನ್ನುಳಿದ ಇಬ್ಬರು ಆರೋಪಿಗಳಾದ ನಿಜಾಜ್ ಮತ್ತು ಸುಹೇಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
PublicNext
12/09/2021 08:36 am