ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇಡಿನಿಂದ 22 ವರ್ಷದ ಬಳಿಕ ಧರ್ಮ ಬದಲಿಸಿದರು : ಮಂಗಳೂರಲ್ಲೊಂದು ವಿಚಿತ್ರ 'ಜಿಹಾದ್'

ಮಂಗಳೂರು : ಮಂಗಳೂರಿನಲ್ಲಿ ಮುಸ್ಲಿಂ ಧರ್ಮದ ಯುವತಿ ಹಿಂದೂ ಧರ್ಮದ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ, ಸುಮಾರು 22 ವರ್ಷ ಕಾದ ಆಕೆಯ ಕುಟುಂಬಸ್ಥರು, ಮಹಿಳೆಯ ಮಗಳನ್ನು ಅಪಹರಿಸಿ ಮುಸ್ಲಿಂ ಯುವಕನ ಜತೆ ಸೇರಿಸಿ ಧರ್ಮ ಬದಲಿಸುವ ತಯಾರಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಗದಗ ಮೂಲದ ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದ ಯುವತಿ 23 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮ ಸ್ವೀಕರಿಸಿ ಯಶೋದಾ ಆಗಿ ಬದಲಾಗಿದ್ದಳು. ಇದು ಆಕೆಯ ತವರು ಮನೆಯವರಿಗೆ ಸಹಿಸಲು ಅಸಾಧ್ಯವಾಗಿತ್ತು. ಇದೇ ಸೇಡಿನಿಂದ ಆಕೆಯ ಕುಟುಂಬ ಯಶೋದಾ ಮಗಳು 22 ವರ್ಷದ ರೇಷ್ಮಾಳನ್ನು ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿದ್ದಾರೆ.

ಹೌದು ರೇಷ್ಮಾಳಿಗೆ ಈಗ 22 ವರ್ಷ. ಆಕೆಗೆ ಹಿಂದೂ ಯುವಕನ ಜತೆ ನಿಶ್ಚಿತಾರ್ಥ ಮಾಡಿದ್ದರು. ಆದರೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಯಶೋದಾ ತವರು ಮನೆಯವರು ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ರೇಷ್ಮಾಳನ್ನು ಅಪ್ಪ-ಅಮ್ಮನಿಗೆ ತಿಳಿಯದಂತೆ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪವಿದೆ.

ಮಾತ್ರವಲ್ಲದೆ ಆಕೆಯ ಮನವೊಲಿಸಿ ನಿಶ್ಚಿತಾರ್ಥಕ್ಕೆಂದು ತಂದಿಟ್ಟಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಹಣದೊಂದಿಗೆ ಕರೆದುಕೊಂಡು ಹೋಗಿ ಯಶೋದಾಳ ಕುಟುಂಬಸ್ಥರು ಆಕೆಗೆ ಅಕ್ಕನ ಮಗನ ಜತೆಯೇ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿದ್ದ ಹಣವನ್ನೆಲ್ಲಾ ಆಕೆ ತನ್ನ ಅಕ್ಕನ ಮಗ ಅಕ್ರಂ ಹೆಸರಿಗೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Edited By : Nirmala Aralikatti
PublicNext

PublicNext

10/09/2021 08:58 am

Cinque Terre

68.48 K

Cinque Terre

12